More

    ಒಂದೇ ಒಂದು ಮೀನಿಗೆ ವ್ಯಕ್ತಿಯೊಬ್ಬ ನೀಡಿದ​ ಹಣದ ಮೊತ್ತ ಕೇಳಿದ್ರೆ ಹೌಹಾರೋದಂತೂ ಖಂಡಿತ!

    ಟೋಕಿಯೊ: ಬ್ಲ್ಯೂಫಿನಾ ಟುನಾ ಹೆಸರಿನ ಮೀನೊಂದಕ್ಕೆ ಬರೋಬ್ಬರಿ 1.8 ಮಿಲಿಯನ್​ ಯೆನ್(1.8 ಮಿಲಿಯನ್​ ಡಾಲರ್​) ಅಂದರೆ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 12,91,69,800 ರೂ. ನೀಡಿ ಖರೀದಿಸಿರುವುದಾಗಿ ಜಪಾನ್​ನಲ್ಲಿ ವರದಿಯಾಗಿದೆ.

    ಟೋಕಿಯೊದ ಟೊಯೊಸು ಮೀನು ಮಾರುಕಟ್ಟೆಯಲ್ಲಿ ನಡೆದ ವರ್ಷದ ಮೊದಲ ಹರಾಜು ಪ್ರಕ್ರಿಯೆಯಲ್ಲಿ ಬ್ಲ್ಯೂಫಿನಾ ಟುನಾ ದಾಖಲೆ ಮೊತ್ತಕ್ಕೆ ಬಿಕರಿಯಾಗಿದೆ. ದಾಖಲೆಯ ಪ್ರಕಾರ ಇದು 2ನೇ ಅತ್ಯಧಿಕ ಮೊತ್ತ ಎಂದು ತಿಳಿದುಬಂದಿದೆ.

    ಟುನಾ ಮೀನನ್ನು ಉತ್ತರ ಅಮೊರಿ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, ಬರೋಬ್ಬರಿ 276 ಕೆ.ಜಿ ತೂಗುತ್ತದೆ. ಬಿಕರಿಯಾದ ಮೊತ್ತವನ್ನು ಕೆ.ಜಿ. ಹೋಲಿಕೆ ಮಾಡಿ ನೋಡಿದಾಗ ಪ್ರತಿ ಕೆ.ಜಿಗೆ 70 ಸಾವಿರ ಯೆನ್​ ಅಂದರೆ ಭಾರತೀಯ ಮೌಲ್ಯದ ಪ್ರಕಾರ 4,64,708 ರೂ. ತಗಲುತ್ತದೆ.

    ಈ ಮೀನನ್ನು ಸುಶಿ ರೆಸ್ಟೋರೆಂಟ್​ ಸರಣಿ ಸುಶಿಝನ್ಮೈ ಮುಖ್ಯಸ್ಥ ಕಿಯೋಶಿ ಕಿಮುರಾ ಹರಾಜಿನಲ್ಲಿ ಕೊಂಡುಕೊಂಡಿದ್ದಾರೆ.

    ಕಳೆದ ವರ್ಷ ನಡೆದ ಹರಾಜಿನಲ್ಲಿ ಕಿಮುರಾ, ಟುನಾ ಮೀನಿಗೆ ಬರೋಬ್ಬರಿ 333.6 ಯೆನ್​ ನೀಡಿದ್ದರು. ಅಲ್ಲದೆ, 2013ರ ತಮ್ಮದೇ ದಾಖಲೆಯನ್ನು ಕಿಮುರಾ ಮುರಿದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts