More

    ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

    ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ತುಮಕೂರಿನ ಶಿರಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.

    ನವೆಂಬರ್​ 3ರಂದು ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನ. 10ರಂದು ಫಲಿತಾಂಶ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್​​ 16 ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್​​ 17ಕ್ಕೆ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ​​. 19 ಕೊನೆಯ ದಿನವಾಗಿದೆ.

    ಕರ್ನಾಟಕದ ಎರಡು ಕ್ಷೇತ್ರ ಸೇರಿದಂತೆ ದೇಶ ಒಟ್ಟು 56 ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿಯಾಗಿದ್ದು, ಅದರ ಪಟ್ಟಿಯನ್ನು ಸುದ್ದಿಯ ಕೊನೆಯಲ್ಲಿ ಕಾಣಬಹುದಾಗಿದೆ.

    ಗರಿಗೆದರಲಿದೆ ರಾಜಕೀಯ ಚಟುವಟಿಕೆ
    ರಾಜರಾಜೇಶ್ವರಿ ನಗರ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್​ ವಿಚಾರವಾಗಿ ಮುನಿರತ್ನಾ ಹಾಗೂ ತುಳಸಿಮುನಿರಾಜಗೌಡ ನಡುವೆ ಫೈಟ್​ ನಡೆಯಲಿದೆ. ಮುನಿರತ್ನ ರಾಜೀನಾಮೆ ನೀಡಿರುದರಿಂದ ಬಿಜೆಪಿ ಟಿಕೆಟ್​ ಮುನಿರತ್ನಗೆ ಪಕ್ಕಾ ಆಗಿದೆ. ಆದರೆ, ಮುನಿರತ್ನಗೆ ಟಿಕೆಟ್ ನೀಡುವುದಕ್ಕೆ ಮುನಿರಾಜು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತೀವ್ರ ಕುತೂಹಲ ಮೂಡಿಸಿದೆ.

    ಇನ್ನು ಕಾಂಗ್ರೆಸ್​ನಿಂದ ಯಾವುದೇ ಹೆಸರು ಫೈನಲ್ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಇನ್ನೆರಡು ದಿನದಲ್ಲಿ ಸಭೆ ಸೇರಿ ಅಭ್ಯರ್ಥಿ ಹೆಸರು ಫೈನಲ್​ ಆಗಲಿದೆ. ಜೆಡಿಎಸ್ ಅಭ್ಯರ್ಥಿ ಸಹ ಇನ್ನೂ ತಿರ್ಮಾನ ಆಗಿಲ್ಲ.

    ಇನ್ನು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಟಿ.ಬಿ.ಜಯಚಂದ್ರರಿಗೆ ಟಿಕೆಟ್ ಫೈನಲ್ ಆಗಿದೆ. ಜೆಡಿಎಸ್ ಹಾಗು ಬಿಜೆಪಿ ಇನ್ನೂ ಅಂತಿಮ‌ ಮಾಡಬೇಕಿದೆ. ನಿಧನರಾದ ಸತ್ಯನಾರಾಯಣ ಕುಟುಂಬದವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.

    ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

    ರಾಜರಾಜೇಶ್ವರಿ ನಗರ, ಶಿರಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts