More

    ಮತ್ತೊಮ್ಮೆ ನನ್ನ ಆಶೀರ್ವದಿಸಿ ಜ್ಯೋತಿಗಣೇಶ್ ಮನವಿ

    ತುಮಕೂರು: ನಗರದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಡಾವಣೆಗಳನ್ನು ಗುರುತಿಸಿ ಶಕ್ತಿ ಮೀರಿ ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿz್ದೆÃನೆ. ಮತ್ತೊಮ್ಮೆ ನನ್ನ ಆಶೀರ್ವದಿಸಿ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.
    ನಗರದ ವಿವಿಧ ವಾರ್ಡ್ಗಳಲ್ಲಿ ಮಂಗಳವಾರ ಮತಬೇಟೆ ಮುಂದುವರೆಸಿದ ಜ್ಯೋತಿಗಣೇಶ್, ಜಯನಗರ, ಮಾರುತಿನಗರ, ನೃಪತುಂಗ ಬಡಾವಣೆ, ಬಡ್ಡಿಹಳ್ಳಿ, ಗಿರಿನಗರ, ಶಿವರಾಮ ಕಾರಂತ ನಗರ, ಸಿದ್ದರಾಮಶ್ವೇರ ಬಡಾವಣೆ, ಗೋಕುಲ ಬಡಾವಣೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಕರೊನಾ ಸಂಕಷ್ಟದ ಸಂದರ್ಭದಲ್ಲಿ ಎದುರಾದ ಆರ್ಥಿಕ ಸಮಸ್ಯೆ ನಡುವೆಯೂ ಸರ್ಕಾರದ ವಿವಿಧ ಯೋಜನೆಗಳಡಿ ಅನುದಾನವನ್ನು ತಂದು ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಿz್ದÉÃನೆ. ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದರೆ ಅಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಶ್ರಮಿಸುತ್ತೇನೆ ಎಂದರು.
    ಕೆಲಸದ ತೃಪ್ತಿ ಇದೆ: ನಗರದ ಇತಿಹಾಸದಲ್ಲಿ ಹಿಂದೆAದು ಕಂಡರಿಯದಷ್ಟು ಅಭಿವೃದ್ಧಿ ಕೆಲಸಗಳು ನನ್ನ ಅವಧಿಯಲ್ಲಾಗಿದ್ದು ಅಭಿವೃದ್ಧಿ ವಿಚಾರವಾಗಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದು ನನಗೆ ಸಂತಸ ತಂದಿದೆ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿಯಿದೆ ಎಂದು ಜ್ಯೋತಿಗಣೇಶ್ ಹೇಳಿದರು.
    ರಾಜಧಾನಿಗೆ ಪರ್ಯಾಯವಾಗಿ ಬೆಳೆಯತ್ತಿರುವ ತುಮಕೂರು ನಗರದ ಅಭಿವೃದ್ಧಿ ಚಿತ್ರಣದ ನೀಲನಕ್ಷೆಯು ನನ್ನ ಮನಸಿನಲ್ಲಿದೆ. ಮತ್ತೊಮ್ಮೆ ನನಗೆ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಸಿಕೊಡಿ. ನಗರದ ಸುಸ್ಥಿರ ಅಭಿವೃದ್ಧಿಗೆ ಸಂಕಲ್ಪ ಮಾಡಿ, ಶ್ರಮಿಸುವೆ ಎಂದರು.
    ಪಾಲಿಕೆ ಸದಸ್ಯೆ ದೀಪಶ್ರೀಮಹೇಶ್‌ಬಾಬು, ಟೂಡಾ ಮಾಜಿ ಅಧ್ಯಕ್ಷ ಬಿ.ಎಸ್.ನಾಗೇಶ್, ಪಾತ್ರೆಚಂದ್ರಣ್ಣ, ಟಿ.ಕೆ.ಗೋಪಾಲ್, ಮೋಹನ್, ನರಸಿಂಹಸ್ವಾಮಿ, ಸದಾರಾಮ್, ಯೋಗೀಶ್, ರೇಣುಕುಮಾರ್, ಶುಭಾರಮೇಶ್, ಗೀತಾ, ಟಿ.ಡಿ.ವಿನಯ್ ಸೇರಿದಂತೆ ನಗರದ ಹಾಗೂ ಬಡಾವಣೆಯ ಬಿಜೆಪಿ ಮುಖಂಡರುಗಳು ಈ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

    ಚಿಕ್ಕಪೇಟೆಯಲ್ಲಿ ರೋಡ್ ಶೋ
    ಮಂಡಿಪೇಟೆ, ಚಿಕ್ಕಪೇಟೆ, ಅಗ್ರಹಾರ, ಗಾರ್ಡನ್ ರಸ್ತೆ, ದಿಬ್ಬೂರು ರಸ್ತೆವರೆಗೂ ಜ್ಯೋತಿಗಣೇಶ್ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು. ಚಿಕ್ಕಪೇಟೆಯಲ್ಲಿ ಕಾರ್ಪೋರೇಟರ್ ದೀಪಶ್ರೀ, ಪಾತ್ರೆಚಂದ್ರಣ್ಣ, ಬಿ.ಎಸ್.ನಾಗೇಶ್ ಸೇರಿದಂತೆ ಹಲವರು ಸಾಥ್ ನೀಡಿದರು. ಸಾವಿರಾರು ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಘೋಷಣೆಗಳನ್ನು ಮೊಳಗಿಸಿ ಪ್ರಚಾರ ರಂಗೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts