More

    ತುಮಕೂರಲ್ಲಿ ಜೆಡಿಎಸ್ ತೊರೆದು ಕೈಹಿಡಿದ ಗೋವಿಂದರಾಜು

    ತುಮಕೂರು: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯವಾದ ಬೆನ್ನಹಿಂದಯೇ ಪಕ್ಷಾಂತರ ಪರ್ವ ಆರಂಭವಾಗಿದ್ದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣಗೆ ಮೊದಲ ಶಾಕ್ ನೀಡಲಾಗಿದೆ.

    ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ 55359 ಮತಗಳನ್ನು ಪಡೆದು ವಿರೋಚಿತ ಸೋಲು ಕಂಡಿದ್ದ ಎನ್.ಗೋವಿಂದರಾಜು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ.

    ಜೆಡಿಎಸ್ ತೊರೆದಿರುವ ಬಲಿಜ ಸಮುದಾಯದ ಎನ್.ಗೋವಿಂದರಾಜು ಹಾಗೂ ಯಾದವ ಸಮುದಾಯದ ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾ ಅವರನ್ನು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಸ್ವಾಗತಿಸಿದರು.

    ತುಮಕೂರು ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಬ್ಯಾಂಕ್ ಹೊಂದಿರುವ ಕಾಂಗ್ರೆಸ್‌ಗೆ ಇತರೆ ಸಮುದಾಯಗಳ ಮತಗಳನ್ನು ತಂದುಕೊಡುವ ನಾಯಕತ್ವ ದೊರೆತಂತಾಗಿರುವುದು ಆನೆಬಲ ಬಂದAತಾಗಿದ್ದು ಮೈತ್ರಿ ಪಕ್ಷ ಜೆಡಿಎಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಿಜೆಪಿಗೆ ತಲೆನೋವು ತಂದಿದೆ.

    ತುಮಕೂರು ಗ್ರಾಮಾಂತರದಲ್ಲಿ ನಾಯಕತ್ವದ ಕೊರತೆ ಎದುರಿಸುತ್ತಿದ್ದ ಜೆಡಿಎಸ್ ಕೂಡ ಕಾಂಗ್ರೆಸ್‌ನಲ್ಲಿದ್ದ ಮಾಜಿ ಶಾಸಕ ಎಚ್.ನಿಂಗಪ್ಪ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿತ್ತು, ಇದಕ್ಕೆ ರಿವರ್ಸ್ ಆಪರೇಷನ್ ಎಂಬAತೆ ಜೆಡಿಎಸ್‌ನ್ನ ಪ್ರಭಾವಿ ಮುಖಂಡನನ್ನು ಸೆಳೆದು ಕಾಂಗ್ರೆಸ್ ರಣತಂತ್ರ ಮೆರೆದಿದೆ..

    ನಗರದ ಕೊಲ್ಲಾಪುದಮ್ಮ ಸಮುದಾಯ ಭವನದಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸೋಲಿಸುವ ಬಗ್ಗೆ ಮಾತನಾಡಿದ್ದ ಗೋವಿಂದರಾಜು ಮರುದಿನವೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಕಾಣಿಸಿಕೊಂಡು ಪಕ್ಷಾಂತರ ಸುಳಿವು ನೀಡಿದ್ದರು.

    ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts