More

    ಕೊರಟಗೆರೆಯಲ್ಲಿ ಕುಡಿಯುವ ನೀರಿಗೂ ತತ್ವಾರ; ಸ್ಥಳಕ್ಕೆ ಜಿಲ್ಲಾಧಿಕಾರಿ ದೌಡು

    ತುಮಕೂರು: ಜಿಲ್ಲೆಯೆಲ್ಲೆಡೆ ಬರದ ಛಾಯೆ ಹೆಚ್ಚಾಗುತ್ತಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಸ್ವಕ್ಷೇತ್ರ ಕೊರಟಗೆರೆಯಲ್ಲಿಯೇ ನೀರಿಗಾಗಿ ಜನರು ಜಿಲ್ಲಾಧಿಕಾರಿಗೆ ಘೆರಾವ್ ಹಾಕಿದ್ದಾರೆ.

    ಕೊರಟಗೆರೆ ತಾಲೂಕು ಬುಕ್ಕಪಟ್ಟಣ ಗ್ರಾಪಂ ವ್ಯಾಪ್ತಿಯ ಗೊಂದಿಹಳ್ಳಿಯಲ್ಲಿ ಕಳೆದ 12 ದಿನಗಳಿಂದ ನೀರು ಇಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಕೂಡಲೇ ಕೊಳವೆಬಾವಿ ಕೊರೆಸಿಕೊಟ್ಟು ಸಮಸ್ಯೆ ಭಗೆಹರಿಸಬೇಕು ಎಂದು ಪಟ್ಟುಹಿಡಿದರು.

    ನೀರಿನ ಅಭಾವದ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಖುದ್ದು ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಶುಭಕಲ್ಯಾಣ್‌ಗೆ ಗ್ರಾಮಸ್ಥರು ನೀರಿನ ಬವಣೆಯನ್ನು ಎಳೆಎಳೆಯಗಿ ವಿವರಿಸಿ ಸಮಸ್ಯೆ ಭಗೆಹರಿಸಲು ಬೇಡಿಕೊಂಡರು.

    ಗ್ರಾಮಸ್ಥರ ಅಳಲು ಆಲಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್, ಮುಂದಿನ ಎರಡು ದಿನದಲ್ಲಿ ಕುಡಿಯುವ ನೀರು ಪೈರೈಕೆಗೆ ಶಾಶ್ವತ ಪರಿಹಾರ ಒದಗಿಸುತ್ತೇನೆ ಎಂದು ಭರವಸೆ ನೀಡಿದ್ದರು. ಕೂಡಲೇ ಕೊಳವೆಬಾವಿ ಕೊರೆಸಲು ಸ್ಥಳದಲ್ಲಿಯೇ ಇದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಕೆ.ಕೀರ್ತಿನಾಯಕ್‌ಗೆ ಸೂಚಿಸಿದರು.

    ಕೊರಟಗೆರೆ ತಾಲೂಕು ಜೆಟ್ಟಿ ಅಗ್ರಹಾರದಲ್ಲಿರುವ ಕೆರೆಗೆ ಹೇಮಾವತಿ ನಾಲೆ ನೀರು ತುಂಬಿಸಿದರೆ ಗೊಂದಿಹಳ್ಳಿ ಗ್ರಾಮಕ್ಕೂ ನೀರು ಪೂರೈಕೆ ಮಾಡಬಹುದು ಎಂದು ಗ್ರಾಮಸ್ಥರೇ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts