More

    ತುಳು ನಾಡಿನ ಪಿಂಗಾರ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

    ಮಂಗಳೂರು: ನವದೆಹಲಿಯಲ್ಲಿ ಸೋಮವಾರ 2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಯಿತು. ಪ್ರೀತಂ ಶೆಟ್ಟಿ ನಿರ್ದೇಶನದ ‘ಪಿಂಗಾರ’ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ, ನಿತಿನ್ ಭಾಸ್ಕರ್ ನಿರ್ದೇಶನದ ಕಾಜ್ರೋ ಸಿನಿಮಾ ಉತ್ತಮ ಕೊಂಕಣಿ ಭಾಷಾ ಸಿನಿಮಾ ಪ್ರಶಸ್ತಿಗೆ ಪಾತ್ರವಾಗಿದೆ.

    ಪಿಂಗಾರ ಸಿನಿಮಾದಲ್ಲಿ 1960-2019ರವರೆಗಿನ ಕಾಲಘಟ್ಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅನ್ಯಾಯ ಮಾಡಿದವರನ್ನು ದೈವ -ದೇವರು ಯಾವ ರೀತಿ ಶಿಕ್ಷಿಸುತ್ತಾರೆ ಎಂಬುದು ಚಿತ್ರದಲ್ಲಿದೆ. ಚಿತ್ರದಲ್ಲಿ ಮೂರು ತಲೆಮಾರಿನ ಜೀವನ ಒಂದು ಇಣುಕುನೋಟವಿದೆ. ಈ ಸಿನಿಮಾವನ್ನು ಅವಿನಾಶ್ ಶೆಟ್ಟಿ ಮತ್ತು ಮಂಜುನಾಥ ರೆಡ್ಡಿ ನಿರ್ಮಿಸಿದ್ದಾರೆ.

    ಕರಾವಳಿಯ ಭೂತಾರಾಧನೆ ಮತ್ತು ತುಳು ಸಂಸ್ಕೃತಿಯ ಮೂಲ ಕಥೆ ಹೊಂದಿರೋ ಈ ಸಿನಿಮಾದಲ್ಲಿ, ನೀಮಾರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ ಮತ್ತು ಪ್ರಶಾಂತ್ ಸಿ.ಕೆ ಮೊದಲಾದವರು ಅಭಿನಯಿಸಿದ್ದಾರೆ.

    ಕಳೆದ ವರ್ಷ ಬೆಂಗಳೂರಿನಲ್ಲಿ ಜರುಗಿದ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಮತ್ತು ಭಾರತೀಯ ಚಲನಚಿತ್ರ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿದ್ದ ಪಿಂಗಾರ ತುಳು ತುಳುಚಲನ ಚಿತ್ರ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿ, ವಿಶೇಷ ನೆಟ್‌ಪ್ಯಾಕ್ ಅಂತಾರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿ (ಅತ್ಯುತ್ತಮ ಏಷ್ಯನ್ ಚಲನಚಿತ್ರ) ತನ್ನದಾಗಿಸಿಕೊಂಡಿತ್ತು.

    ಶುಭ ಬಿಗ್​ಬಾಸ್​ನಲ್ಲಿದ್ದರೆ, ಆಕೆಯ ಭಾವಿ ಪತಿ ಏನು ಮಾಡುತ್ತಿದ್ದಾರೆ ಗೊತ್ತಾ? ಸುದೀಪ್​ ಬಿಚ್ಚಿಟ್ಟ ಸತ್ಯ ಏನು?

     ನಾಲ್ಕನೇ ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಕಂಗನಾ​- ಮಣಿಕರ್ಣಿಕಾ, ಪಂಗಾ ಚಿತ್ರಗಳಿಗೆ ಪ್ರಶಸ್ತಿ ಗರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts