More

  ತುಳಜಾಭವಾನಿ ಮೂರ್ತಿ ಮೆರವಣಿಗೆ ವಿಜೃಂಭಣೆ

  ಲಿಂಗಸುಗೂರು: ತುಳಜಾಭವಾನಿ ದೇವಿಯ ಎಂಟನೇ ವರ್ಷದ ವಾರ್ಷಿಕೋತ್ಸವ ನಿಮಿತ್ತ ಪಟ್ಟಣದಲ್ಲಿ ದೇವಿಯ ಉತ್ಸವ ಮೂರ್ತಿ ಪಲ್ಲಕ್ಕಿ ಮಹೋತ್ಸವವು ಕುಂಭ-ಕಳಸ, ಡೊಳ್ಳು, ಸಂಗೀತ ಕಲಾ ತಂಡಗಳ ಸಹಿತ ಶನಿವಾರ ಅದ್ದೂರಿಯಾಗಿ ಮೆರವಣಿಗೆ ಜರುಗಿತು.

  ಉತ್ಸವ ಮೂರ್ತಿ ಪಲ್ಲಕ್ಕಿ ಮಹೋತ್ಸವ

  ವಾರ್ಷಿಕೋತ್ಸವ ಪ್ರಯುಕ್ತ ಬೆಳಗ್ಗೆ 11 ಗಂಟೆಗೆ ಅರ್ಚಕ ತಿರುಮಲರಾವ್ ಕುಲಕರ್ಣಿ, ಕೃಷ್ಣಾ ಕುಲಕರ್ಣಿ ನೇತೃತ್ವದಲ್ಲಿ ತುಳಜಾಭವಾನಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ನವಗ್ರಹ ಹೋಮ, ಹವನದ ಬಳಿಕ ಮಂಗಳಾರತಿ ಕಾರ್ಯಕ್ರಮಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

  ಇದನ್ನೂ ಓದಿ: ಪದಕ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ

  ದೇವಸ್ಥಾನ ಸಮಿತಿ ಅಧ್ಯಕ್ಷ ಕಿಶನರಾವ್ ಚೌಹಾಣ, ಮುಖಂಡರಾದ ವಿಠ್ಠಲರಾವ್ ಭೂಸಾರೆ, ದಶರಥರಾವ್, ಮಲ್ಲಿಕಾರ್ಜುನ ಕೇಶುತ್ಕರ್, ರಾಘವೇಂದ್ರ, ಅಶೋಕ ಚೌಹಾಣ, ದೇವರಾಜ ಛತ್ರಬಂದ್, ಗುರುರಾಜ, ಸತ್ಯನಾರಾಯಣ, ಆನಂದ, ರಂಗನಾಥ, ನವೀನ್ ಮಿರಜಕರ್, ಗೌತಮ, ಹನುಮಂತ ಮಿರಜಕರ್, ಜಯಶ್ರೀ, ರಾಜೇಶ್ವರಿ, ಶಿಲ್ಪಾ, ಸುಧಾ, ಸಂಧ್ಯಾರಾಣಿ, ರತ್ನಾಬಾಯಿ, ಅಂಜನಾಬಾಯಿ, ಸುಂದರಾಬಾಯಿ ಇನ್ನಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts