More

    ಪದಕ ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ

    ಮೈಸೂರು: ಪಿಲಿಫೆನ್ಸ್‌ನಲ್ಲಿ ಇತ್ತೀಚೆಗೆ ನಡೆದ 22ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪದಕ ಪಡೆದವರು, ಆರನೇ ಸ್ಥಾನದೊಳಗೆ ಬಂದು, ಮುಂದಿನ ವರ್ಷ ಸ್ವೀಡನ್‌ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವವರನ್ನು ಸನ್ಮಾನಿಸಲಾಯಿತು.
    ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ನಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೆಸೂರು ಜಿಲ್ಲೆಯ ಹಿರಿಯ ಕ್ರೀಡಾಪಟುಗಳು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಕ್ರೀಡಾಕೂಟಕ್ಕೆ ಹೋದರೂ ಪದಕಗಳನ್ನು ಗಳಿಸಿಕೊಂಡು ಬರುತ್ತಿದ್ದಾರೆ. ಇವರ ಸಾಧನೆ ಯುವಕರಿಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.
    ಇವತ್ತು ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬಂದಿದೆ. ಇದರಿಂದಾಗಿಯೇ ನಾನಾ ಬಗೆಯ ದೈಹಿಕ ಕಸರಸ್ತುಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಶ್ರೀಮಂತಿಕೆ ಎಷ್ಟೇ ಇದ್ದರೂ ಆರೋಗ್ಯ ಇಲ್ಲದಿದ್ದರೆ ವ್ಯರ್ಥ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವುದರ ಕಡೆ ಗಮನಹರಿಸಬೇಕು. ಜತೆಗೆ ಕ್ರೀಡಾ ಸಾಧಕರಿಗೆ ಪ್ರೋತ್ಸಾಹ ನೀಡಿ, ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದು ತಿಳಿಸಿದರು.
    ಸಂಘದ ಅಧ್ಯಕ್ಷ ಪಿ.ಜಿ.ಸತ್ಯನಾರಾಯಣ್, ಉಪಾಧ್ಯಕ್ಷ ಜಿ.ಎನ್.ಸೋಮಶೇಖರ್, ಅಥ್ಲೆಟಿಕ್ ತರಬೇತುದಾರ ಜಿ.ಆರ್.ಪ್ರಭಾಕರ್, ಎಂ.ಪಿ. ಚಂದ್ರಶೇಖರ್, ಬಿ.ಕೆ.ಸೋಮಶೇಖರ್, ಮಹದೇವಯ್ಯ, ಎಚ್.ಆರ್.ರಾಮಸ್ವಾಮಿ, ಪಿ.ಜಿ.ಚಂದ್ರಶೇಖ್, ಪೊಲೀಸ್ ಸುಬ್ಬಣ್ಣ, ಸಿ.ಕೆ. ಮುರಳೀಧರನ್, ಮಡಿಲು ಟ್ರಸ್ಟ್‌ನ ಲೋಕರಾಜ್ ಅರಸು ಇತರರು ಇದ್ದರು.
    70 ವರ್ಷ ಮೇಲ್ಪಟ್ಟವರ 400 ಮೀಟರ್ ಓಟದಲ್ಲಿ ಮಹದೇವು ಕಂಚಿನ ಪದಕ, 40 ವರ್ಷ ಮೇಲ್ಪಟ್ಟವರ 400 ಮೀ. ರಿಲೇ ಓಟದಲ್ಲಿ ನಾಗೇಂದ್ರ ಮುಳ್ಳೂರು ಬೆಳ್ಳಿ ಪದಕ ಪಡೆದಿದ್ದಾರೆ. ಇದಲ್ಲದೆ ಮಾದಪ್ಪ ಯೋಗೇಂದ್ರ, ಎಸ್. ಮಹದೇವು, ಎಚ್.ಎಂ. ಸುಜಾತಾ, ಜಿ.ಜಿ. ರಘುನಂದನ್, ಮಲ್ಲಯ್ಯ, ಕೃಷ್ಣಯ್ಯ ಆರರೊಳಗಿನ ಸ್ಥಾನ ಗಳಿಸಿ, ಮುಂದಿನ ವರ್ಷ ಸ್ವೀಡನ್‌ನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕ ಅರ್ಹತೆ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts