More

    ಅಲಯನ್ಸ್‌ಟಗ್ ತೆರವಿಗೆ ಬದ್ರಿಯಾ, ಯೋಜಕ ಜಂಟಿ ಕಾರ್ಯಾಚರಣೆಗೆ ಉಡುಪಿ ಡಿಸಿ ಸೂಚನೆ

    ಪಡುಬಿದ್ರಿ: ಇಲ್ಲಿನ ಕಾಡಿಪಟ್ಣ ಸಮುದ್ರ ತೀರದಲ್ಲಿ ದುರಂತಕ್ಕೀಡಾಗಿರುವ ಅಲಯನ್ಸ್ ಟಗ್ ಮಗುಚಿ ಹಾಕುವ ಕಾರ್ಯವನ್ನು ಮಂಗಳೂರು ಬದ್ರಿಯಾ ಕಂಪನಿಯ ಬಿಲಾಲ್ ಮೊಯ್ದಿನ್ ತಂಡ ಹಾಗೂ ಮಂಗಳೂರಿನ ಯೋಜಕ ಕಂಪನಿ ಜಂಟಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
    ಟಗ್ ಮಗುಚಿ 8 ದಿನ ಕಳೆದರೂ ತೆರವು ಕಾರ್ಯ ನಡೆದಿಲ್ಲ. ಬದ್ರಿಯಾ ಕಂಪನಿ ಕಳೆದ ನಾಲ್ಕು ದಿನಗಳಿಂದ ಟಗ್ ಮಗುಚಿ ಹಾಕುವ ಪ್ರಯತ್ನ ನಡೆಸಿದರೂ ಸಫಲವಾಗಿಲ್ಲ. ಪಡುಬಿದ್ರಿಗೆ ಭಾನುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಕಾಡಿಪಟ್ಣದದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿ.ಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ವೆಂಕಟೇಶ್, ಬದ್ರಿಯಾ ಹಾಗೂ ಯೋಜಕ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯರಿದ್ದ ಸಭೆಯಲ್ಲಿ ಟಗ್ ಶೀಘ್ರದಲ್ಲಿ ತೆರವುಗೊಳಿಸುವಂತೆ ತಾಕೀತು ಮಾಡಿದರು.

    ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎರಡೂ ಕಂಪನಿಗಳು ಹೊಂದಾಣಿಕೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಲಾಲಾಜಿ ಮೆಂಡನ್ ಸೂಚಿಸಿದರು. ಸ್ಥಳೀಯರಿಗಿರುವ ಸಾಂಕ್ರಾಮಿಕ ರೋಗ ಭಯ ಮತ್ತು ಪರಿಸರ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಶೀಘ್ರ ಟಗ್ ತೆರವು ಕಾರ್ಯಾಚರಣೆ ಆಗಬೇಕು ಎಂದು ಶಶಿಕಾಂತ್ ಒತ್ತಾಯಿಸಿದರು.

    ಬೀಚ್‌ಗಳತ್ತ ಜನ: ಟಗ್ ತೆರವು ಕಾರ್ಯಾಚರಣೆ ವೀಕ್ಷಿಸುವ ಸಲುವಾಗಿ ಜನ ದಿನನಿತ್ಯ ಬೆಳಗ್ಗಿನಿಂದ ಸಂಜೆವರೆಗೆ ವಾಹನಗಳಲ್ಲಿ ಬೀಚ್‌ಗಳತ್ತ ಆಗಮಿಸಿ ಲಾಕ್‌ಡೌನ್ ಮಾರ್ಗಸೂಚಿ ಉಲ್ಲಂಘಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮವಹಿಸಬೇಕಾದ ಅನಿವಾರ್ಯತೆ ಇದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts