More

    ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ

    ಅಳವಂಡಿ: ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆಯದಿದ್ದರೆ ವರ್ಷದಲ್ಲಿ ಸುಮಾರು 10 ರಿಂದ 15 ಜನರಿಗೆ ರೋಗ ಅಂಟಿಸುತ್ತಾನೆ.

    ಇದನ್ನೂ ಓದಿ: http://ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ.

    ಈಗಾಗಿ ವಿಧ್ಯಾರ್ಥಿಗಳು ತಿಳಿದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕು ಹಾಗೂ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ ತಿಳಿಸಿದರು.

    ಬೋಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಳವಂಡಿ, ಸರ್ಕಾರಿ ಪ್ರೌಢಶಾಲೆ ಬೋಚನಹಳ್ಳಿ ಸಂಯುಕ್ತ ಆಶ್ರಯದಲ್ಲಿ ನಡೆದ ಕ್ಷಯಮುಕ್ತ ಶಾಲೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    2025 ಕ್ಷಯ ಮುಕ್ತ ಕರ್ನಾಟಕ ಗುರಿ ಸಾಧನೆಗೆ ಎಲ್ಲ ಇಲಾಖೆಗಳು ಸಹಕರಿಸಬೇಕು. ಜಿಲ್ಲೆಯ ಶಾಲಾ, ಕಾಲೇಜ, ವಸತಿ ನಿಲಯ, ಇತರ ಕೆಲಸದ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಸಾಂಕ್ರಾಮಿಕ ರೋಗಗಳಲ್ಲಿ ಕ್ಷಯರೋಗ ಒಂದು ಇದು ಮೈಕ್ರೋ ಬ್ಯಾಕ್ಟೇರಿಯಾ ಟ್ಯೂಬರ್ ಕ್ಯೂಲೆಸಿಸ್ ಎಂಬ ಸೂಕ್ಷ್ಮಾಣುವಿನಿಂದ ಗಾಳಿಯ ಮೂಲಕ ಹರಡುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಬರುವಂತಹ ಹನಿಗಳು ಗಾಳಿಯ ಮೂಲಕ ರೋಗ ನಿರೋಧಕ ಶಕ್ತಿ ಇರುವ ಹಾಗೂ ಸಹ ವ್ಯಾಧಿಗಳಿಗೆ ಬೇಹನೆ ಹರಡುತ್ತದೆ.

    ಸತತ ಕೆಮ್ಮು, ಕೆಮ್ಮಿನಲ್ಲಿ ಕಫ ಬರುವದು, ಕಫದಲ್ಲಿ ರಕ್ತ ಬೀಳುವದು, ಹಸಿವಾಗದೇ ಇರುವದು, ಸಾಯಂಕಾಲ ಜ್ವರ ಬರುವದು ಈ ರೋಗ ಲಕ್ಷಣಗಳಾಗಿದೆ.

    ಈ ಅಂಶ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಉಚಿತ ಚಿಕಿತ್ಸೆ ಪಡೆಯಿರಿ. ಕ್ಷಯರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ ಸ್ವಾಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದರು.

    ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಹದಿಹರೆಯದವರ ಆರೋಗ್ಯ ಮಹತ್ವ, ರಕ್ತಹೀನತೆ, ಮಲೇರಿಯಾ, ಡೆಂಗ್ಯೂ, ಚಿಕನಗುನ್ಯಾ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts