More

    ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್​…!

    ವಾಷಿಂಗ್ಟನ್​: ತಮ್ಮ ಎರಡು ಟ್ವೀಟ್​ಗಳನ್ನು ಫ್ಯಾಕ್ಟ್​ಚೆಕ್​ ನಡೆಸಿದ್ದಕ್ಕೆ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ರದ್ದುಗೊಳಿಸುವುದಾಗಿ ಬುಧವಾರ ಬೆದರಿಕೆ ಹಾಕಿದ್ದಾರೆ.

    ಟ್ರಂಪ್​ ಅವರು ಮಾಡಿದ ಎರಡು ಟ್ವೀಟ್​ ಆಧಾರರಹಿತವಾಗಿದ್ದು, ತಪ್ಪು ಮಾಹಿತಿಯನ್ನು ಹರಡಿದ್ದಾರೆಂದು ಎಂದು ಟ್ವಿಟರ್​ ಆರೋಪಿಸಿದೆ. ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಟ್ರಂಪ್​, ಸಂಪ್ರದಾಯವಾದಿಗಳ ಧ್ವನಿಯ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆ ಯಾವಾಗಲು ಸಂಪೂರ್ಣ ಮೌನವಾಗಿರುತ್ತದೆ ಎಂದು ರಿಪಬ್ಲಿಕನ್ಸ್​ ಭಾವಿಸಿದೆ. ಇದು ಸಂಭವಿಸಲು ಅನುಮತಿ ನೀಡುವ ಮುನ್ನವೇ ನಾವು ಬಲವಾಗಿ ನಿಯಂತ್ರಿಸಬೇಕಾಗುತ್ತದೆ ಅಥವಾ ಸಂಪೂರ್ಣವಾಗಿ ಜಾಲತಾಣ ವೇದಿಕೆಗಳನ್ನು ಮುಚ್ಚಬೇಕಿದೆ ಎಂದು ಬೆದರಿಕೆ ಹಾಕಿದ್ದಾರೆ.

    ಇದನ್ನೂ ಓದಿ: VIDEO| ನಿನ್ನೆ ಮಂಡ್ಯ, ಇಂದು ಮೈಸೂರಿನಲ್ಲಿ ಮುಸ್ಸಂಜೆ ವೇಳೆ ದಿಢೀರ್​ ಬೆಳಕು: ಬೆರಗಾದ ಗ್ರಾಮಸ್ಥರು!

    ಟ್ರಂಪ್​ ಮಂಗಳವಾರ ಎರಡು ಟ್ವೀಟ್​ಗಳನ್ನು ಮಾಡಿದ್ದರು. ಅದರಲ್ಲಿ ಮೇಲ್​ ಇನ್ ಮತದಾನವು ವಂಚನೆ ಹಾಗೂ ಕೈಚಳಕದ ಚುನಾವಣೆಗೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿದ್ದರು. ಹೀಗಾಗಿ ಯಾವುದೇ ಪುರಾವೆ ಇಲ್ಲದೇ ಟ್ವೀಟ್​ ಮಾಡಿದ್ದಕ್ಕೆ ಆಧಾರರಹಿತ ಎಂದು ಟ್ರಂಪ್​ ಟ್ವೀಟ್​ ಅನ್ನು ಟ್ವಿಟರ್​ ತಳ್ಳಿ ಹಾಕಿದೆ.

    ಬುಧವಾರ ಮತ್ತೊಮ್ಮೆ ಟ್ವೀಟ್​ ಮಾಡಿರುವ ಟ್ರಂಪ್​ ಯಾವುದೇ ಕಾರಣಕ್ಕೂ ಮೇಲ್​ ಇನ್​ ಬ್ಯಾಲಟ್ಸ್​ ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಬೇರೂರಲು ಬಿಡುವುದಿಲ್ಲ. ಮೇಲ್​ ಇನ್​ ಮತದಾನದಿಂದ ವಂಚನೆ ಹಾಗೂ ಪೋರ್ಜರಿಗೆ ಮುಕ್ತ ಅವಕಾಶ ಸಿಗಲಿದೆ ಎಂದು ದೂರಿದರು. ಯಾರು ಹೆಚ್ಚು ಮೋಸ ಮಾಡುತ್ತಾರೋ ಅವರು ಗೆಲ್ಲುತ್ತಾರೆ. ಹೀಗಾಗಿ ನಿಮ್ಮ ನಡೆಯನ್ನು ಸ್ವಚ್ಛಗೊಳಿಸಿಕೊಳ್ಳಿ ಎಂದು ಟ್ರಂಪ್​ ಜಾಲತಾಣಗಳಿಗೆ ಟಾಂಗ್​ ನೀಡಿದ್ದರು.

    ಇದನ್ನೂ ಓದಿ: ಸಾವರ್ಕರ್ ಹೆಸರಿನ ವಿವಾದ: ಮೇಲ್ಸೇತುವೆ ಉದ್ಘಾಟನೆಯೇ ಮುಂದೂಡಿಕೆ!

    ಕಳೆದ 2016ರ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣ ಮೂಗು ತೂರಿಸಿತ್ತು. ಏನೆಲ್ಲಾ ಮಾಡಲು ಪ್ರಯತ್ನಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಅದರಲ್ಲಿ ಅವರು ವಿಫಲ ಕೂಡ ಆದರು. ಈ ರೀತಿ ಮತ್ತೊಮ್ಮೆ ಆಗಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್​)

    ಮೇ 31ರ ಬಳಿಕ ಕೇಂದ್ರದಿಂದ ಮತ್ತೆರಡು ವಾರ ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts