More

    VIDEO| ರಾಷ್ಟ್ರಪತಿ ಭವನದಲ್ಲಿ ಟ್ರಂಪ್​ ದಂಪತಿ: ಸೇನಾಪಡೆಗಳಿಂದ ಗೌರವ ಸಮರ್ಪಣೆ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಎರಡನೇ ದಿನದ ಕಾರ್ಯಕ್ರಮ ಪ್ರಾರಂಭವಾಗಿದೆ. ರಾಷ್ಟ್ರಪ್ರತಿ ಭವನದಲ್ಲಿ ಟ್ರಂಪ್​ ಅವರ ಗೌರವಾರ್ಥ ಸಮಾರಂಭ ಜರುಗಿತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಕೇಂದ್ರ ಸಚಿವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಾಗತ ಕೋರಿದರು. ಡೊನಾಲ್ಡ್​ ಟ್ರಂಪ್​ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಲ್ಲಿರುವ ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳಿಗೆ ಶೇಕ್​ ಹ್ಯಾಂಡ್ ಮಾಡಿದ ಟ್ರಂಪ್​ ಚುಟುಕಾಗಿ ಮಾತುಕತೆ ನಡೆಸಿದರು.

    ರಾಷ್ಟ್ರಪತಿ ಭವನದಲ್ಲಿ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಯಿತು. ಮೂರೂ ಸೇನಾಪಡೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಗೌರವ ಸಲ್ಲಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಮೆಲಾನಿಯಾ ಟ್ರಂಪ್​, ರಾಷ್ಟ್ರಪತಿ ರಾಮನಾಥ ಕೋವಿಂದ, ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ಗ್ರೂಪ್​ ಫೋಟೋಕ್ಕೆ ಪೋಸ್​ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts