More

    ಟಿಆರ್​ಪಿ ಹಗರಣ : ಪಾರ್ಥೋ ದಾಸ್​ಗುಪ್ತಗೆ ತಾತ್ಕಾಲಿಕ ಜಾಮೀನು

    ಮುಂಬೈ: ಟಿಆರ್​ಪಿ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬ್ರಾಡ್​ಕಾಸ್ಟ್​ ಆಡಿಯನ್ಸ್​ ರಿಸರ್ಚ್​ ಕೌನ್ಸಿಲ್​(ಬಿಎಆರ್​ಸಿ)ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತ ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ನೀಡಿದೆ. ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಲಾಭಕ್ಕಾಗಿ ಟಿವಿ ಸುದ್ದಿ ವಾಹಿನಿಗಳ ಟಾರ್ಗೆಟ್ ರೇಟಿಂಗ್ ಪಾಯಿಂಟ್‌(ಟಿಆರ್‌ಪಿ)ಗಳನ್ನು ಏರುಪೇರು ಮಾಡಿದ ಬಗ್ಗೆ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾದ ದಾಸ್​ಗುಪ್ತ, ಎರಡು ತಿಂಗಳಿಂದ ತಾಲೋಜ ಜೈಲಿನಲ್ಲಿ ಬಂಧಿಯಾಗಿದ್ದಾರೆ.

    ಜೂನ್ 2013 ರಿಂದ 2019 ರ ನವೆಂಬರ್ ನಡುವೆ ಬಿಎಆರ್​ಸಿ ಸಿಇಒ ಆಗಿದ್ದ ದಾಸ್​ಗುಪ್ತ ಅವರು, ಮುಂಬೈ ಪೊಲೀಸರು ಅಕ್ಟೋಬರ್​ 2020 ರಲ್ಲಿ ನೋಂದಾಯಿಸಿರುವ ಟಿಆರ್​ಪಿ ಮಾನಿಪುಲೇಷನ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ಣಬ್ ಗೋಸ್ವಾಮಿ ಅವರಿಂದ 12,000 ಡಾಲರ್ ಮತ್ತು 40 ಲಕ್ಷ ರೂ. ನಗದನ್ನು ಪಡೆದು ಅವರ ಚಾನೆಲ್​ನ ಟಿಆರ್​ಪಿಯನ್ನು ಹೆಚ್ಚಾಗಿ ತೋರಿಸಿದರೆಂದು ಆರೋಪಿಸಲಾಗಿದೆ. 2020ರ ಡಿಸೆಂಬರ್ 24 ರಂದು ದಾಸ್​ಗುಪ್ತ ಅವರನ್ನು ಬಂಧಿಸಲಾಗಿತ್ತು.

    ಇದನ್ನೂ ಓದಿ: ಒಂದು ಕಪ್​ ಟೀ ಬೆಲೆ ಸಾವಿರ ರೂಪಾಯಿ: ಟೀಪುಡಿ ಬೆಲೆ ಕೇಳಿದ್ರಂತೂ ಶಾಕ್​ ಆಗ್ತೀರಾ!

    ಕಳೆದ ತಿಂಗಳು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ಸೆಷನ್ಸ್ ಕೋರ್ಟ್ ಆದೇಶದ ವಿರುದ್ಧ, ದಾಸ್​ಗುಪ್ತ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ದಾಸ್​ಗುಪ್ತ ಪರ ವಕೀಲರು ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಬಿಎಆರ್​ಸಿಯ ಸಿಒಒ ರೋಮಿಲ್ ರಾಮ್‌ಘಾರಿಯಾ ಸೇರಿದಂತೆ ಇತರ ಎಲ್ಲ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಮತ್ತು ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ವಾದಿಸಿದ್ದರು.

    ಮೇಲ್ಮನವಿಯ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಪಿ.ಡಿ.ನಾಯಕ್, 2 ಲಕ್ಷ ರೂ. ನಗದು ಪಾವತಿಯ ಮೇಲೆ ಆರು ವಾರಗಳ ತಾತ್ಕಾಲಿಕ ಜಾಮೀನು ನೀಡುವ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

    ನಿರ್ಜನ ರಸ್ತೆಯಲ್ಲಿ ಮಹಿಳೆಯರ ಮೇಲೆರಗುತ್ತಿದ್ದ ‘ಸೀರಿಯಲ್ ರೇಪಿಸ್ಟ್’ ಬಂಧನ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts