ನಿರ್ಜನ ರಸ್ತೆಯಲ್ಲಿ ಮಹಿಳೆಯರ ಮೇಲೆರಗುತ್ತಿದ್ದ ‘ಸೀರಿಯಲ್ ರೇಪಿಸ್ಟ್’ ಬಂಧನ

ನಾಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನಾಯ್ಡಾದಲ್ಲಿ ಜನಸಂಚಾರವಿಲ್ಲದ ರಸ್ತೆಗಳಲ್ಲಿ ಪೊದೆಯಲ್ಲಿ ಬಚ್ಚಿಟ್ಟುಕೊಂಡು ಮಹಿಳೆಯರ ಮೇಲೆರಗಿ ಅತ್ಯಾಚಾರ ನಡೆಸುತ್ತಿದ್ದ ‘ಸೀರಿಯಲ್ ರೇಪಿಸ್ಟ್​’ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಕೇಸಿನಲ್ಲೇ ಜಾಮೀನಿನ ಮೇಲೆ ಹೊರಬಂದಿದ್ದ ಈ ಆರೋಪಿ, ಮತ್ತೆ ನಾಲ್ಕು ಅತ್ಯಾಚಾರವೆಸಗಿ, ಕೊನೆಗೂ ಪೊಲೀಸರ ವಶವಾಗಿದ್ದಾನೆ. ಫೆಬ್ರವರಿ 25 ರಂದು ಗ್ರೇಟರ್ ನಾಯ್ಡಾದ ಸೂರಜ್​ಪುರ್ ಪೊಲೀಸ್ ಠಾಣೆಗೆ ಅತ್ಯಾಚಾರದ ದೂರೊಂದು ಬಂತು. ಅದರ ತನಿಖೆ ಆರಂಭಿಸಿದಾಗ, 2019ರಲ್ಲಿ ಅತ್ಯಾಚಾರದ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಒಬ್ಬಾತನ ಕಡೆಗೆ ಸಾಕ್ಷ್ಯಗಳು ಬೆಟ್ಟು ಮಾಡಿದವು. ಈತ … Continue reading ನಿರ್ಜನ ರಸ್ತೆಯಲ್ಲಿ ಮಹಿಳೆಯರ ಮೇಲೆರಗುತ್ತಿದ್ದ ‘ಸೀರಿಯಲ್ ರೇಪಿಸ್ಟ್’ ಬಂಧನ