ಸ್ಥಳದಲ್ಲೇ ಸಮಸ್ಯೆಗಳ ನಿವಾರಣೆ

blank

ಗುಂಡ್ಲುಪೇಟೆ: ಸರ್ಕಾರ ಬಹುತೇಕ ಇಲಾಖೆಗಳಲ್ಲಿ ಖಾಲಿಯಿರುವ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

ತಾಲೂಕಿನ ಬೊಮ್ಮಲಾಪುರ ಗ್ರಾಮಪಂಚಾಯಿತಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಾರ್ವಜನಿಕರ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದು, ಜನಪರವಾದ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಆಸ್ಪತ್ರೆ, ಗ್ರಾಮ ಪಂಚಾಯಿತಿ ಹಾಗೂ ಶಾಲೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಕಾಲದಲ್ಲಿ ಸಾರ್ವಜನಿಕರ ಕೆಲಸ, ಕಾರ್ಯಗಳು ಆಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಅಗತ್ಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಳ್ಳಲಾಗುವುದು. ಹೊಸ ಬಡಾವಣೆಗಳಲ್ಲಿ ನಿವೇಶನ ಹೊಂದಿರುವ ಎಲ್ಲರೂ ಮನೆ ಕಟ್ಟಿಕೊಂಡರೆ ಮಾತ್ರ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಗ್ರಾಮಾಂತರ ಪ್ರದೇಶಗಳ ಜನರ ಕುಂದುಕೊರತೆ ನಿವಾರಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿದ್ದಮ್ಮಣ್ಣಿ, ಉಪಾಧ್ಯಕ್ಷೆ ಸಿದ್ದಮ್ಮ, ಅಭಿವೃದ್ಧಿ ಅಧಿಕಾರಿ ಸುನೀತಾ, ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ಮುಖಂಡ ಕೆ.ಎಲ್.ಚಂದ್ರಶೇಖರ್ ಮತ್ತಿತರರಿದ್ದರು.

Share This Article

ಈ ಸಮಯದಲ್ಲಿ ನೀವು ನಿಂಬು ಜ್ಯೂಸ್​​ ಕುಡಿದರೆ ಅಪಾಯವಾಗಬಹುದು..ಎಚ್ಚರ! Lemon Water

Lemon Water: ಬೇಸಿಗೆಯ ಬಿಸಿಲಿಗೆ ಬೆವೆತು ದೇಹವನ್ನು ತಂಪಾಗಿಸಲು ಮತ್ತು ದಾಹವನ್ನು ನೀಗಿಸಲು ನಾವು ಸಾಮಾನ್ಯವಾಗಿ…

ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಒಂದು ಕೆಲಸ ಮಾಡಿ: ಬೆಳಗ್ಗೆ ಉತ್ಸಾಹದಿಂದ ಎದ್ದೇಳಬಹುದು.. sleeping tips

sleeping tips : ಸಾಕಷ್ಟು ನಿದ್ರೆ ಬರದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಾವು ಎಷ್ಟು…

ಮಧ್ಯರಾತ್ರಿ ಕಳೆದರೂ ನಿದ್ದೆ ಬರ್ತಿಲ್ವಾ? ಹಾಗಾದರೆ ಈ ಸಮಸ್ಯೆಗಳನ್ನು ಎದುರಿಸಲು ನೀವು ರೆಡಿಯಾಗಿ! Sleep

Sleep : ಇಂದಿನ ಕಾರ್ಯನಿರತ ಜೀವನದಲ್ಲಿ ಕಾಲದ ಜೊತೆಗೆ, ಜನರ ಜೀವನಶೈಲಿಯಲ್ಲಿಯೂ ಅನೇಕ ದೊಡ್ಡ ಬದಲಾವಣೆಗಳಾಗಿವೆ.…