More

    ತ್ರಿಪುರಾ ವಿಶ್ವವಿದ್ಯಾಲಯದಲ್ಲಿ stand against rape ಎಂಬ ಗ್ರೂಪ್​ ಅಸ್ತಿತ್ವಕ್ಕೆ ಬರಲು ಇದು ಕಾರಣ

    ನವದೆಹಲಿ: ತ್ರಿಪುರಾದ ಖೋವಾಯ್​ ಎಂಬ ಜಿಲ್ಲೆಯಲ್ಲಿ ದುಷ್ಕರ್ಮಿಗಳು 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೂವರು ರೇಪಿಸ್ಟ್​ಗಳು ಸೇರಿ, ಇವರಿಗೆ ಆಶ್ರಯ ನೀಡಿದ ಆರೋಪದಲ್ಲಿ ಇನ್ನು ಏಳು ಮಂದಿ ಸೇರಿ ಒಟ್ಟು 10 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ತ್ರಿಪುರಾದ ಖಾಸಿಯಾಮಂಗಲ್​ ಎಂಬ ಅರಣ್ಯ ಪ್ರದೇಶದಲ್ಲಿ ಜು.21ರಂದು ಈ ಪ್ರಕರಣ ನಡೆದಿದ್ದು, ಇನ್ನೂ ಇಬ್ಬರು ರೇಪಿಸ್ಟ್​ಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್

    ಪ್ರಕರಣ ನಡೆದ ದಿನವೇ ದೂರು ದಾಖಲಾಗಿತ್ತು. ಆದರೆ, ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕೊನೆಗೆ ಸಿಪಾಯಿಜಾಲಾ ಜಿಲ್ಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಯಿತು ಎಂದು ತ್ರಿಪುರಾ ಪೊಲೀಸ್​ನ ಡಿಐಜಿ ತಿಳಿಸಿದ್ದಾರೆ.

    ಭಾರಿ ಖಂಡನೆ: ಘಟನೆಯನ್ನು ಖಂಡಿಸಿ ತ್ರಿಪುರಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ತಪ್ಪಿತಸ್ಥರನ್ನು ಬಂಧಿಸಿ, ತ್ವರಿತ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ವಿವಿಯ ವಿದ್ಯಾರ್ಥಿನಿ ಅಸ್ಮಿರಾ ದೇವ್​ ವರ್ಮಾ ಎಂಬುವರು Stand Against Rape ಎಂಬ ಗ್ರೂಪ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದು, ಈ ಗ್ರೂಪ್​ನ ಭಾಗವಾಗುವ ಮೂಲಕ ಅತ್ಯಾಚಾರ ಪ್ರಕರಣಗಳ ವಿರುದ್ಧ ಧ್ವನಿಎತ್ತಲು ಮುಂದಾಗುವಂತೆ ಮನವಿ ಮಾಡಿಕೊಂಡಿದ್ದಾರೆ.

    VIDEO| ಸುಶಾಂತ್​ ಆತ್ಮಹತ್ಯೆ ಪ್ರಕರಣ: ಬಿಹಾರ ಪೊಲೀಸರಿಗೆ ಸಿಕ್ಕ ವಿಡಿಯೋದಲ್ಲಿದೆ ರಿಯಾ ನಿಗೂಢ ಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts