More

    ಬಸವೇಶ್ವರರಿಗೆ ಲಂಡನ್​ನಲ್ಲಿ ಗೌರವ ಸಲ್ಲಿಸಿದ ಗಾಯಕ ವಿಜಯ್ ಪ್ರಕಾಶ್

    ಲಂಡನ್​: ಖ್ಯಾತ ಗಾಯಕ, ಸಂಗೀತ ಸಂಯೋಜಕ ವಿಜಯ್ ಪ್ರಕಾಶ್ ಅವರು ಲಂಡನ್​ನಲ್ಲಿ ಬಸವೇಶ್ವರರಿಗೆ ಗೌರವ ಸಲ್ಲಿಸಿದ್ದಾರೆ. ಲಂಡನ್​ನಲ್ಲಿ ಬಸವಣ್ಣನವರ ಪ್ರತಿಮೆ ಮುಂದೆ ಅವರದ್ದೇ ವಚನವೊಂದನ್ನು ಹಾಡುವ ಮೂಲಕ ವಿಜಯ್ ಪ್ರಕಾಶ್ ಈ ಗೌರವ ಸಲ್ಲಿಸಿದ್ದಾರೆ.

    ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ..’ ಎಂಬ ವಚನವನ್ನು ಅವರು ಪ್ರತಿಮೆ ಮುಂದೆ ಹಾಡಿದ್ದಾರೆ.

    ಬ್ರಿಟಿಷ್ ಸಂಸತ್ತಿನ ಎದುರಿನಲ್ಲಿ ಭಾರತದ, ಅದರಲ್ಲೂ ಕನ್ನಡದ ದಾರ್ಶನಿಕ ಬಸವಣ್ಣನವರ ಪ್ರತಿಮೆಯನ್ನು ನೋಡುವುದು ಪ್ರತಿ ಭಾರತೀಯ ಹಾಗೂ ಕನ್ನಡಿಗನಿಗೆ ಅತ್ಯಂತ ಹೆಮ್ಮೆಯ ಸಂಗತಿ ಎಂಬುದಾಗಿ ಅವರು ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಯುಕೆ ಬಸವ ಸಮಿತಿ ಮತ್ತು ದ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್​ ಇಲ್ಲಿನ ಥೇಮ್ಸ್ ನದಿಯ ತಟದಲ್ಲಿ 2015ರಲ್ಲಿ ಈ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಿತ್ತು. ಈ ಹಿನ್ನೆಲೆಯಲ್ಲಿ ವಿಜಯ್ ಪ್ರಕಾಶ್ ಅವರು ಬಸವೇಶ್ವರ ಫೌಂಡೇಷನ್​ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯರಾದ ಅಭಿಜೀತ್ ಸಾಲಿಮಠ, ಮಿರ್ಜಿ ರಂಗನಾಥ್, ಕಾಂತಿ ಪಟೇಲ್, ರಾಜೀವ್ ಮೇತ್ರಿ, ಗಣಪತಿ ಭಟ್, ಡಾ.ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು.

    ಬಸವೇಶ್ವರರಿಗೆ ಲಂಡನ್​ನಲ್ಲಿ ಗೌರವ ಸಲ್ಲಿಸಿದ ಗಾಯಕ ವಿಜಯ್ ಪ್ರಕಾಶ್

    ರೂಪಾಯಿ ಕುಸಿತವಾಗುತ್ತಿಲ್ಲ, ಡಾಲರ್ ಸಶಕ್ತವಾಗುತ್ತಿದೆ: ಹಣದುಬ್ಬರವನ್ನು ಹೀಗೆ ಸಮರ್ಥಿಸಿಕೊಂಡ ವಿತ್ತಸಚಿವೆ

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    ಬದುಕಿದ್ದ ವೃದ್ಧೆಯನ್ನೇ ಕಚ್ಚಿ ಕಚ್ಚಿ ತಿಂದ ಬೀದಿನಾಯಿಗಳು!; ಸಾರ್ವಜನಿಕರಿಂದ ಅಂತ್ಯಸಂಸ್ಕಾರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts