More

    ಪ್ರಶಸ್ತಿಗಳ ಸಿಹಿ ಗಿರಿಜನರಿಗೆ ಗೊತ್ತಿಲ್ಲ

    ಹುಣಸೂರು: ಗಿರಿಜನರಿಗೆ ಜೇನಿನ ಸಿಹಿ ಗೊತ್ತು ಹೊರತು ಪ್ರಶಸ್ತಿಗಳ ಸಿಹಿ ಎಂದರೆ ಗೊತ್ತಿಲ್ಲ. ಬದುಕಿನ ಜಟಕಾಬಂಡಿ ಎಳೆಯುವಲ್ಲೇ ಸಿಹಿ-ಕಹಿಯನ್ನು ಕಾಣುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಿವಾಸಿಗಳ ಬದುಕಿನ ಹಕ್ಕಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಅದೇ ನಮಗೆ ಜೇನಿನ ಸಿಹಿ ನೀಡಿದಂತಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಆದಿವಾಸಿ ಮುಖಂಡ ಮೊತ್ತಹಾಡಿ ಸೋಮಣ್ಣ ಅಭಿಪ್ರಾಯಪಟ್ಟರು.

    ಪಟ್ಟಣದ ಡೀಡ್ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆಳುವ ಸರ್ಕಾರಗಳು ಆದಿವಾಸಿಗಳನ್ನು ಅತಂತ್ರ ಸ್ಥಿತಿಯಲ್ಲಿಟ್ಟು ಬೇಜವಾಬ್ದಾರಿ ಪ್ರದರ್ಶಿಸುತ್ತಿವೆ. ಇದು ಸರಿಯಲ್ಲ ಎಂದು ಬೇಸರಿಸಿದ ಅವರು, ನನೆಗುದಿಗೆ ಬಿದ್ದಿರುವ ಅರಣ್ಯ ಹಕ್ಕಿನ ಕಾಯ್ದೆ, ಪುರ್ನವಸತಿ, ಅನುಸೂಚಿತ ಪ್ರದೇಶಗಳ ಘೋಷಣೆ, ಆದಿವಾಸಿಗಳಿಗೆ ಒಳಮಿಸಲಾತಿ ಇವುಗಳನ್ನು ತುರ್ತಾಗಿ ಅನುಷ್ಠಾನಗೊಳಿಸಿದರೆ ನಮ್ಮ ಜನರಿಗೆ ಅನುಕೂಲವಾಗುತ್ತದೆ. ಅವರು ಖುಷಿಯಿಂದ ಬಾಳ್ವೆ ನಡೆಸುವರು ಎಂದರು.

    ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ ಮಾತನಾಡಿದರು. ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಪ್ರಕಾಶ್, ಸಿಬ್ಬಂದಿ ಮತ್ತು ಆದಿವಾಸಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts