More

    ವೀಕ್ಲಿ ಎಕ್ಸ್​ಪ್ರೆಸ್ ರೈಲು ಸಂಚಾರ

    ಹುಬ್ಬಳ್ಳಿ : ಪ್ರಯಾಣಿಕರ ಬೇಡಿಕೆ ಮೇರೆಗೆ ನೈಋತ್ಯ ರೈಲ್ವೆ ವಲಯವು ಎಸ್​ಎಸ್​ಎಸ್ ಹುಬ್ಬಳ್ಳಿ ಮತ್ತು ಕೊಟ್ಟಾಯಮ್ ನಿಲ್ದಾಣಗಳ ಮಧ್ಯೆ ಸ್ಪೇಷಲ್ ವೀಕ್ಲಿ ಎಕ್ಸ್​ಪ್ರೆಸ್ ರೈಲು ಸಂಚಾರ ಪ್ರಾರಂಭಿಸಲು ನಿರ್ಧರಿಸಿದೆ.

    ಡಿ. 2 ರಿಂದ 2024ರ ಜ. 20ರವರೆಗೆ ಬೆಳಗ್ಗೆ 10.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ.

    ಡಿ. 3 ರಿಂದ ಜನವರಿ 21 ರವರೆಗೆ ಬೆಳಗ್ಗೆ 11ಕ್ಕೆ ಕೊಟ್ಟಾಯಮ್ಂದ ಹೊರಡುವ ರೈಲು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

    ಮತ್ತೊಂದು ರೈಲು ಡಿ. 5 ರಿಂದ 2024ರ ಜನವರಿ 16ರವರೆಗೆ ಬೆಳಗ್ಗೆ 11 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 8.15ಕ್ಕೆ ಕೊಟ್ಟಾಯಮ್ ನಿಲ್ದಾಣ ತಲುಪಲಿದೆ. ಈ ರೈಲು ಡಿ. 6 ರಿಂದ 2024ರ ಜನವರಿ 17ರವರೆಗೆ ಬೆಳಗ್ಗೆ 11 ಗಂಟೆಗೆ ಕೊಟ್ಟಾಯಮ್ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.50ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts