More

    ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ತೊಡಕಾದ ಮರ


    ಕಾರವಾರ: ರಸ್ತೆಯಲ್ಲಿ ಮರ ಬಿದ್ದ ಕಾರಣ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಸಂಕಷ್ಟ ಅನುಭವಿಸಿದ ಘಟನೆ ಗುರುವಾರ ನಡೆಯಿತು.

    ಹೊನ್ನಾವರ ತಾಲೂಕಿನ ಚಿತ್ತಾರ ಅಡಕೆಕುಳಿ ಭಾಗದಿಂದ ಎಸ್ಸೆಸ್ಸೆಲ್ಸಿಯ 40 ವಿದ್ಯಾರ್ಥಿಗಳು ಬುಧವಾರ ಬೆಳಗ್ಗೆ ಮಂಕಿಯ ಪರೀಕ್ಷಾ ಕೇಂದ್ರಕ್ಕೆ ಬರಬೇಕಿತ್ತು. ಈ ಪೈಕಿ ನಾಲ್ವರು ಪಾಲಕರ ಸ್ವಂತ ವಾಹನದಲ್ಲಿ ಬಂದಿದ್ದರು. ಇನ್ನುಳಿದ 36 ವಿದ್ಯಾರ್ಥಿಗಳನ್ನು ಕರೆತರಲು ಸಾರಿಗೆ ಸಂಸ್ಥೆ ಬಸ್ ಅಡಕೆಕುಳಿಯತ್ತ ತೆರಳಿತ್ತು. ಆಗ ಚಿತ್ತಾರ ಸಮೀಪ ರಸ್ತೆಗೆ ಅಡ್ಡಲಾಗಿ ದೊಡ್ಡ ಮರವೊಂದು ಮುರಿದು ಬಿದ್ದಿತ್ತು. ವಿದ್ಯುತ್ ಕಂಬವೂ ನೆಲಕ್ಕುರುಳಿತ್ತು. ತಕ್ಷಣಕ್ಕೆ ಮರ ತೆರವು ಮಾಡುವಂತೆಯೂ ಇರಲಿಲ್ಲ. ಇದರಿಂದ ಬಸ್ ಮಂಕಿಯತ್ತ ಬರಲಾರದ ಪರಿಸ್ಥಿತಿ ಎದುರಾಗಿತ್ತು.

    ತಕ್ಷಣ ಮಾಹಿತಿ ಪಡೆದ ಸ್ಥಳೀಯರು, ಸ್ಥಳೀಯ ಶಿಕ್ಷಣ ಸಂಯೋಜಕರು, ಶಿಕ್ಷಕರು ಕಾರು, ಬೈಕ್​ಗಳ ಮೂಲಕ ಎಲ್ಲ ವಿದ್ಯಾರ್ಥಿಗಳನ್ನು ಬೆಳಗ್ಗೆ 9.30ರೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ್ದಾರೆ. ಶಿಕ್ಷಕರು, ಸಿಆರ್​ಪಿ ಕಾರ್ಯಕ್ಕೆ ಡಿಡಿಪಿಐ ಹರೀಶ ಗಾಂವಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರತ್ಯೇಕವಾಗಿ ಪರೀಕ್ಷೆ ಬರೆದ ಐವರು: ಎಸ್ಸೆಸ್ಸೆಲ್ಸಿ ಎರಡನೇ ದಿನದ ಪರೀಕ್ಷೆ ಗುರುವಾರ ಸುಸೂತ್ರವಾಗಿ ಜರುಗಿತು. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಹೆಸರು ನೋಂದಾಯಿಸಿದ್ದ 10227 ವಿದ್ಯಾರ್ಥಿಗಳ ಪೈಕಿ 32 ಮಕ್ಕಳು ತೃತೀಯ ಭಾಷೆ ಪರೀಕ್ಷೆಗೆ, 36 ದ್ವಿತೀಯ ಭಾಷೆಗೆ, 38 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆಗೆ ಗೈರಾಗಿದ್ದರು. ಕೋವಿಡ್ ಸೋಂಕಿತ ನಾಲ್ವರು ವಿದ್ಯಾರ್ಥಿಗಳು ಪ್ರತ್ಯೇಕ ಐಸೋಲೇಷನ್​ನಲ್ಲಿ ಪರೀಕ್ಷೆ ಬರೆದರು. ಒಬ್ಬ ವಿದ್ಯಾರ್ಥಿಗೆ ಜ್ವರದ ಲಕ್ಷಣಗಳಿದ್ದ ಕಾರಣ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts