More

    6425 ಮಂದಿಗೆ ಲಸಿಕೆ

    ಮಂಗಳೂರು/ಉಡುಪಿ: ದ.ಕ.ಜಿಲ್ಲೆಗೆ ಮೇ 4ರಂದು ಬಂದ 7,000 ಡೋಸ್ ಕೋವಿಶೀಲ್ಡ್ ಲಸಿಕೆಯಲ್ಲಿ, ಬುಧವಾರ 6425 ಮಂದಿಗೆ ಲಸಿಕೆ ನೀಡಲಾಗಿದೆ.
    ಆರೋಗ್ಯ ಇಲಾಖೆಯಲ್ಲಿ ಸದ್ಯ 575 ಡೋಸ್ ಲಸಿಕೆಯಷ್ಟೇ ಇದೆ. ವೆನ್ಲಾಕ್‌ನಲ್ಲಿ 200 ಡೋಸ್ ಲಸಿಕೆ ಇದ್ದು, ಮುಗಿಯುವ ತನಕ ನೀಡಲಾಗುತ್ತದೆ. ಗುರುವಾರ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರಣ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಅಭಿಯಾನ ಇಲ್ಲ. ತಾಲೂಕು, ಸಮುದಾಯ ಆಸ್ಪತ್ರೆಗಳಲ್ಲಿ ಲಸಿಕೆ ಖಾಲಿಯಾದ ಕಾರಣ ಅಭಿಯಾನ ಇರುವುದಿಲ್ಲ. ಲಸಿಕೆ ಲಭ್ಯತೆ ಕಡಿಮೆ ಇದ್ದರೂ, ಇನ್ನೆರಡು ದಿನ ಬೆಂಗಳೂರಿನಿಂದ ಜಿಲ್ಲೆಗೆ ಲಸಿಕೆ ಬರುವುದು ಅನುಮಾನ ಎನ್ನಲಾಗುತ್ತಿದೆ.

    ದ.ಕ.ಜಿಲ್ಲೆಯಲ್ಲಿ ಬುಧವಾರ 60 ವರ್ಷ ಮೇಲ್ಪಟ್ಟ 688 ಮಂದಿ ಮೊದಲನೇ ಡೋಸ್, 3097 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 37 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್, 155 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 25 ಮಂದಿ ್ರಂಟ್‌ಲೈನ್ ವರ್ಕರ್ಸ್‌ ಮೊದಲನೇ ಡೋಸ್, 81 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 1309 ಮಂದಿ ಮೊದಲನೇ ಡೋಸ್, 1033 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 132 ಮಂದಿಗೆ ಮೊದಲ ಡೋಸ್ ಹಾಗೂ 95 ಮಂದಿಗೆ 2ನೇ ಡೋಸ್ ಲಸಿಕೆ ವಿತರಿಸಲಾಗಿದೆ.

    ಲಸಿಕೆ ಸಾಲಿನಲ್ಲೂ ಇಲ್ಲ ಅಂತರ!: ಕರೊನಾ ಸೋಂಕು ದಿನದಿಂದ ದಿನಕ್ಕೆ ಹರಡುತ್ತಿದ್ದರೂ, ಸಾರ್ವಜನಿಕರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬಂದವರು ಕೂಡ ದೈಹಿಕ ಅಂತರ ಪಾಲಿಸುತ್ತಿಲ್ಲ. ಗ್ರಾಮೀಣ ಭಾಗಗಳಲ್ಲೂ ಇದೇ ಸ್ಥಿತಿ.
    ನಗರದ ವಿವಿಧ ಕಡೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅವಶ್ಯ ವಸ್ತು ಖರೀದಿಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಅವಕಾಶ ಮಾಡಿಕೊಟ್ಟಿದ್ದರೂ, ಅಂತರ ಕಾಯ್ದುಕೊಳ್ಳದೆ ಮುಗಿಬೀಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಕೂಡ ಕ್ರಮಕೈಗೊಳ್ಳುತ್ತಿಲ್ಲ. ಸೆಂಟ್ರಲ್ ಮಾರುಕಟ್ಟೆ ಪ್ರದೇಶದಲ್ಲಿ ಬಟ್ಟೆ, ಚಪ್ಪಲಿ ಮಾರಾಟ ಅಂಗಡಿಯವರು ಅರ್ಧ ಶಟರ್ ತೆರೆದು ವ್ಯಾಪಾರ ಮಾಡಿದ್ದರೂ, ಪೊಲೀಸರು ಗಮನ ಹರಿಸಿಲ್ಲ. ವಾಹನಗಳ ಓಡಾಟ ಬುಧವಾರವೂ ಹೆಚ್ಚಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts