More

    ಪ್ರವಾಸಿಗರೆ ನಮ್ಮೂರಿಗೆ ಕಾಲಿಡ ಬೇಡಿ,ನಮ್ಮನ್ನು ಬದುಕಲು ಬಿಡಿ

    ಕಳಸ: ತೆರೆದಿದೆ ಮನೆ ಬಾ ಅತಿಥಿ ಎನ್ನುತ್ತಿದ ಮಲೆನಾಡಿಗರು ಸದ್ಯದ ಮಟ್ಟಿಗೆ ನಮ್ಮೂರಿಗೆ ಕಾಲಿಡಬೇಡಿ, ನಮ್ಮಿಂದ ದೂರವಿದ್ದು ಸುರಕ್ಷಿತವಾಗಿ ಬದುಕಲು ಬಿಡಿ ಎನ್ನುವಂತಾಗಿದೆ.

    ಕಳಸ ಹೋಬಳಿ ಪ್ರವಾಸಿಗರ ಸ್ವರ್ಗ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಮತ್ತಷ್ಟು ದುಪ್ಪಟ್ಟಾಗುತ್ತದೆ. ಇಲ್ಲಿನ ಹೊರನಾಡು, ಕಳಸ ಧಾರ್ವಿುಕ ಕೇಂದ್ರಗಳು, ಕುದುರೆಮುಖ, ಕ್ಯಾತನಮಕ್ಕಿ, ಮೈದಾಡಿ, ಅಂಬಾತೀರ್ಥ, ಫಾಲ್ಸ್ ಹೀಗೆ ಹಲವು ಪ್ರಾಕೃತಿಕ ಸೌಂದರ್ಯ ತಾಣಗಳನ್ನು ಹೊಂದಿರುವ ಇಲ್ಲಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

    ಕರೊನಾ ಭೀತಿಯಿಂದ ಕಳಸ ಕಡೆ ಮುಖಮಾಡದ ಪ್ರವಾಸಿಗರು ಲಾಕ್​ಡೌನ್ ಮುಗಿಯುತ್ತಿದ್ದಂತೆ ಮತ್ತೆ ಬರಲು ಆರಂಭಿಸಿದ್ದಾರೆ. ಕರೊನಾ ನಿಯಮ ಪಾಲಿಸುತ್ತಿಲ್ಲ. ಈ ಬಗ್ಗೆ ಸ್ಥಳೀಯರು ಪ್ರಶ್ನೆ ಮಾಡಿದರೆ ಜಗಳಕ್ಕೆ ನಿಲ್ಲುತ್ತಾರೆ. ಬಂದ ಪ್ರವಾಸಿಗರು ಪಾರ್ಟಿ, ಮೋಜು ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಸ್ಥಳೀಯರು ನಮ್ಮ ಊರಿಗೆ ಪ್ರವಾಸಿಗರು ಬರುವುದು ಬೇಡ ಎನ್ನುತ್ತಿದ್ದಾರೆ.

    ಕ್ಯಾತನಮಕ್ಕಿ, ಸುರುಮನೆ ಫಾಲ್ಸ್ ಮುಂತಾದೆಡೆ ಪ್ರವಾಸಿಗರು ಬಾರದಂತೆ ಸೂಚನಾ ಫಲಕ ಹಾಕಲಾಗಿದೆ. ಬಂದವರಿಗೆ ದಂಡ ಹಾಕಿಸಲಾಗುತ್ತಿದೆ. ಜತೆಗೆ ಬಾರದಂತೆ ಕೈಮುಗಿದು ಪ್ರವಾಸಿಗರನ್ನು ಬೇಡಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts