More

    ಸೌಂದರ್ಯ ದ್ರವ್ಯಗಳು ಸ್ತ್ರೀಯರಿಗೆ ಕಂಟಕ

    ತಾವರಗೇರಾ: ಆಧುನಿಕ ಜೀವನ ಶೈಲಿ ಅಳವಡಿಕೆಯಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಕಾವೇರಿ ಶ್ಯಾವಿ ಹೇಳಿದರು.

    ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಗೆ ಕೇವಲ 100 ರೂ; ಹೊಸ ಸಂಶೋಧನೆಯಲ್ಲಿ ಕುತೂಹಲಕಾರಿ ಸಂಗತಿ ಬಹಿರಂಗ!

    ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯಲ್ಲಿ ಗುರುವಾರ ಮಾತನಾಡಿದರು.

    ಫ್ಯಾಷನ್ ವಸ್ತುಗಳ ಬಳಕೆ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಭಯಾನಕ ರೋಗಗಳು ಆಗಿದ್ದು, ಇವುಗಳ ತಡೆಗೆ ಸ್ತನಗಳಲ್ಲಿ ಗಡ್ಡೆಗಳು ಕಂಡು ಬಂದರೆ ಹಾಗೂ ತೀವ್ರ ರಕ್ತಸ್ರಾವವಾಗುತ್ತಿದ್ದಾರೆ ತಪಾಸಣೆ ಮಾಡಿಸಬೇಕು. ಕ್ಯಾನ್ಸರ್ ರೋಗ ಬೇಗ ಪತ್ತೆ ಹಚ್ಚಿದರೆ ಗುಣಮುಖರಾಗಲು ಸಾಧ್ಯ ಎಂದರು.

    ದಂತ ವೈದ್ಯ ಡಾ.ರಾಜೇಂದ್ರ ಪ್ರಸಾದ್ ಮಾತನಾಡಿ, ಬಾಯಿ ಕ್ಯಾನ್ಸರ್ ಕಾಯಿಲೆ ಗುರುತಿಸಲು ಕನಿಷ್ಠ ತಿಂಗಳಿಗೆ ಒಮ್ಮೆಯಾದರೂ ದಂತ ವೈದ್ಯರ ಹತ್ತಿರ ತಪಾಸಣೆ ಮಾಡಿಸಬೇಕು ಎಂದರು.

    ಹಿರಿಯ ಆರೋಗ್ಯ ಮೇಲ್ವಿಚಾರಕಿ ಶಂಕ್ರಮ್ಮ, ಶುಶ್ರೂಷಕಿಯರಾದ ಮುತ್ತಮ್ಮ, ಸೀತಾ, ಸೌಭಾಗ್ಯ, ಹಿರಿಯ ಆರೋಗ್ಯ ಸಹಾಯಕಿ ರೇಣುಕಾ, ಗೌರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts