More

    ಅಮ್ಮಾ ತಾಯಿ.. ಭಿಕ್ಷೆ ನೀಡಿ.. ಸಂಬಳ ಕೊಟ್ಟಿಲ್ಲ, ದಯವಿಟ್ಟು ಭಿಕ್ಷೆ ಹಾಕಿ: ಹಬ್ಬದ ದಿನವೇ ಸಾರಿಗೆ ಸಂಸ್ಥೆ ನೌಕರರಿಂದ ಭಿಕ್ಷಾಟನೆ

    ಕೋಲಾರ/ಬಾಗಲಕೋಟೆ: ನಷ್ಟದ ಕಾರಣಕ್ಕೆ ಸಂಬಳ ಕೊಡಲೂ ಹಣವಿಲ್ಲ ಎಂದು ಹೇಳಿದ್ದ ಸಾರಿಗೆ ಸಂಸ್ಥೆ ಇದೀಗ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಕೆಲವರಿಗಷ್ಟೇ ವೇತನ ನೀಡಿದೆ. ಈ ನಡುವೆ ಹಬ್ಬ ಆಚರಿಸಲು ಹಣವಿಲ್ಲ ಎಂದು ಹೇಳಿ ಸಾರಿಗೆ ಸಂಸ್ಥೆ ನೌಕರರು ಭಿಕ್ಷಾಟನೆ ಮಾಡಿದ್ದೂ ನಡೆದಿದೆ.

    ಕೋಲಾರ ಜಿಲ್ಲೆಯ ಮುಳಬಾಗಿಲು ಬಸ್ ನಿಲ್ದಾಣ ಬಳಿ ಸಾರಿಗೆ ಸಂಸ್ಥೆ ನೌಕರ ಪ್ರೇಮ್​ಕುಮಾರ್​ ಹಬ್ಬದ ದಿನವಾದ ಯುಗಾದಿಯಂದೇ ಭಿಕ್ಷೆ ಬೇಡಿದ್ದಾರೆ. ಸಂಸ್ಥೆ ಸಂಬಳ ನೀಡದ ಕಾರಣ ಹಬ್ಬ ಆಚರಣೆ ಮಾಡಲೂ ಹಣವಿಲ್ಲ. ಅದರಲ್ಲೂ ಬಸ್​ ನಿಲ್ದಾಣದಲ್ಲಿ ಇವರೊಬ್ಬರೇ ಭಿಕ್ಷೆ ಬೇಡಿಲ್ಲ. ಭಿಕ್ಷಾಟನೆಗೆ ತನ್ನಿಬ್ಬರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದರಿಂದ ಸಾರ್ವಜನಿಕರು ಅನುಕಂಪ ವ್ಯಕ್ತಪಡಿಸಿದರು.

    ಇದನ್ನೂ ಓದಿ: ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

    ಮತ್ತೊಂದೆಡೆ ಬಾಗಲಕೋಟೆಯಲ್ಲಿ ಚಾಲಕಿ-ಕಂ-ಕಂಡಕ್ಟರ್​ರೊಬ್ಬರು ಮನೆಮನೆಗೂ ತೆರಳಿ ಭಿಕ್ಷಾಟನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ರಾಜೇಶ್ವರಿ ಬಂಗಾರಿ ಎಂಬ ಈ ಉದ್ಯೋಗಿ ತಟ್ಟೆ ಹಿಡಿದು ಬೇಡಿದ್ದು, ಜನರು ಐದು, ಹತ್ತು, ಇಪ್ಪತ್ತು ರೂಪಾಯಿ ಭಿಕ್ಷೆ ನೀಡಿದ್ದಾರೆ. ಬಿರು ಬಿಸಿಲಿನಲ್ಲಿ ಒಂಟಿಯಾಗಿ ತಿರುಗಾಡಿದ ಇವರು, ‘ಅಮ್ಮಾ.. ತಾಯಿ.. ನಮಗೆ ಸಂಬಳ ಕೊಟ್ಟಿಲ್ಲ.. ಉಣ್ಣಲೂ ಏನೂ ಇಲ್ಲ..’ ಎಂದು ಬೇಡಿದ್ದಾರೆ.

    ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ

    ಬಸ್​ ಚಕ್ರದಡಿ ಮಲಗಿ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ: ಠಾಣೆಯಲ್ಲಿ ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡ ನೌಕರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts