More

    ಟ್ರಾನ್ಸ್​ಪೋರ್ಟ್ ಸಿಟಿ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮನವಿ

    ಹುಬ್ಬಳ್ಳಿ : ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಗ್ರಾಮದ 56 ಎಕರೆ 13 ಗುಂಟೆ ಜಾಗದಲ್ಲಿ ಸರಕು ಸಾಗಣೆದಾರರ (ಟ್ರಾನ್ಸ್​ಪೋರ್ಟ್ ಸಿಟಿ) ನಗರ ಸ್ಥಾಪಿಸುವಂತೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಗೂಡ್ಸ್ ಟ್ರಾನ್ಸ್​ಪೋರ್ಟರ್ಸ್ ಆಂಡ್ ಲಾರಿ ಓನರ್ಸ್ ಅಸೊಸಿಯೇಷನ್ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರದಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಈ ಮೊದಲು ಗಬ್ಬೂರಿನಲ್ಲಿ 114 ಎಕರೆ ಜಮೀನನ್ನು ಸಾರಿಗೆ ನಗರವನ್ನಾಗಿ ನಿರ್ವಿುಸಲು ಮಂಜೂರು ಮಾಡಲಾಗಿತ್ತು. ಕಾರಣಾಂತರಗಳಿಂದ ಆ ಜಾಗ ಲಭ್ಯವಾಗಲಿಲ್ಲ. ಅಂಚಟಗೇರಿಯಲ್ಲಿ 56.13 ಎಕರೆ ಜಾಗ ಮಂಜೂರು ಮಾಡಿ 10-12 ವರ್ಷಗಳು ಕಳೆದಿವೆ. ಆದರೂ, ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯಾದ್ಯಂತ ವಾಣಿಜ್ಯ ನಗರಗಳ ಬಳಿಯ ಬೈಪಾಸ್, ರಿಂಗ್​ರೋಡ್ ಬಳಿ ಟ್ರಾನ್ಸ್​ಪೋರ್ಟ್ ನಗರ ಮತ್ತು ಟರ್ವಿುನಲ್ ನಿರ್ವಿುಸಬೇಕು. ಅಲ್ಲಿ ಟ್ರಾನ್ಸ್​ಪೋರ್ಟ್ ಉದ್ಯಮಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಸರ್ಕಾರದ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮನವಿ ಸ್ವೀಕರಿಸಿದರು. ಅಸೋಸಿಯೇಷನ್ ಅಧ್ಯಕ್ಷ ವಾಸು ಕೋನರೆಡ್ಡಿ, ರವೀಂದ್ರ ಬೆಳವಂಕರ, ಸಮೀರ ಪೀರಜಾದೆ, ರಮೇಶ ಕಾಲವಾಡ, ಕಿರಣ ಪಟೇಲ, ಮಂಜುನಾಥ ಕಿರೇಸೂರ, ಸತೀಶ ಮಾಡಳ್ಳಿ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts