More

    ಉಪನ್ಯಾಸಕರ ವರ್ಗಾವಣೆ ನಿಯಮ ಅಂತಿಮ: ಕನಿಷ್ಠ 3 ವರ್ಷಗಳ ಸೇವಾವಧಿ ಪೂರೈಸಿರಬೇಕು; ಶೇ.10 ಮಿತಿ ನಿಗದಿ

    ಬೆಂಗಳೂರು: ರಾಜ್ಯ ಸರ್ಕಾರ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ವರ್ಗಾವಣೆ ನಿಯಮ ಪರಿಷ್ಕರಿಸಿದ್ದು, ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರನ್ನು ಅರ್ಹರೆಂದು ಪರಿಗಣಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ವರ್ಗಾವಣೆ ಪ್ರಕ್ರಿಯೆಯ ನಿಯಂತ್ರಣಾಧಿಕಾರಿಗಳನ್ನಾಗಿ ನೇಮಕ ಮಾಡಿ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಪ್ರಾಂಶುಪಾಲರ ಕೋರಿಕೆ ಮೇರೆಗೆ ವರ್ಗಾವಣೆಗೆ (ಸಾಮಾನ್ಯ ವಿಭಾಗ) ಶೇ.10 ಮಿತಿ ನಿಗದಿಪಡಿಸಿದ್ದು, ಉಪನ್ಯಾಸಕರ ವರ್ಗಾವಣೆಗೂ ಇದೇ ಮಿತಿ ಅನ್ವಯಿಸಲಿದೆ. ಆದರೆ, ಆಯಾ ವಿಭಾಗದ ವಿಷಯ ಉಪನ್ಯಾಸಕರ ಸಂಖ್ಯಾಬಲವನ್ನು ಇದು ಆಧರಿಸಿದೆ. ಮರು ನಿಯೋಜನೆ, ಹೆಚ್ಚುವರಿ ವರ್ಗಾವಣೆ ಹಾಗೂ ಪರಸ್ಪರ ಒಪ್ಪಿಗೆ ಮೇರೆಗೆ ನಡೆಯುವ ವರ್ಗಾವಣೆಗಳನ್ನು ಈ ಮಿತಿಯಿಂದ ಹೊರಗಿಡಲಾಗಿದೆ. ವರ್ಗಾವಣೆಗಾಗಿ ಅರ್ಜಿ ಸಲ್ಲಿಕೆ ಹಾಗೂ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಆನ್​ಲೈನ್ ಮೂಲಕವೇ ನಡೆಸಬೇಕೆಂದು ಸ್ಪಷ್ಟಪಡಿಸಲಾಗಿದೆ.

    ಉಪನ್ಯಾಸಕರ ಮರು-ನಿಯೋಜನೆ: ಪ್ರತಿ ಎರಡು ವರ್ಷಗಳಿಗೊಮ್ಮೆ ಮಂಜೂರಾದ ಉಪನ್ಯಾಸಕರ ಸಂಖ್ಯಾಬಲವನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ. ಹೆಚ್ಚುವರಿ ಉಪನ್ಯಾಸಕರನ್ನು ಅಗತ್ಯವಿರುವ ಕಾಲೇಜುಗಳಿಗೆ ಮರು-ನಿಯೋಜಿಸಲಾಗುತ್ತದೆ. ನಂತರವಷ್ಟೇ ಕಾಲೇಜಿಗೆ ಅನುಗುಣವಾಗಿ ಮಂಜೂರಾದ ಹುದ್ದೆ ಲೆಕ್ಕ ಹಾಕಲಾಗುವುದು. ನಂತರ ಖಾಲಿ ಇರುವ ಉಪನ್ಯಾಸಕರ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ.

    ಆದ್ಯತಾ ಅಂಶಗಳು

    • ಗಂಭೀರ ಕಾಯಿಲೆಗೆ ತುತ್ತಾಗಿರುವವರು/ಸ್ಥಳೀಯವಾಗಿ ಚಿಕಿತ್ಸೆ ದೊರೆಯದಿರುವವರು, ಶೇ.40ಕ್ಕೂ ಹೆಚ್ಚು ಅಂಗವೈಕಲ್ಯಕ್ಕೆ ಒಳಗಾದ ಸಂಗಾತಿ ಅಥವಾ ಮಕ್ಕಳನ್ನು ಹೊಂದಿರುವವರು
    • ಮಕ್ಕಳನ್ನು ಹೊಂದಿರುವ ವಿಧವೆ/ವಿಧುರ =ಮಕ್ಕಳನ್ನು ಹೊಂದಿರುವ ವಿಚ್ಛೇದಿತರು
    • ಹುತಾತ್ಮ/ವಿಕಲಾಂಗ ಸೈನಿಕ/ಮಾಜಿ ಸೈನಿಕನನ್ನು ಸಂಗಾತಿಯಾಗಿ ಹೊಂದಿರುವವರು
    • ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರನ್ನು ಸಂಗಾತಿಯಾಗಿ ಹೊಂದಿದವರು =ಐವತ್ತಕ್ಕೂ ಹೆಚ್ಚು ವಯಸ್ಸಿನ ಮಹಿಳೆ, ಐವತೆôದು ವರ್ಷಕ್ಕಿಂತ ಹೆಚ್ಚಿನ ಪುರುಷರು =ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗು ಹೊಂದಿರುವ ಮಹಿಳೆ/ಗರ್ಭಿಣಿಯರು

    ವಲಯಗಳು

    • ಎ ಬಿಬಿಎಂಪಿ, ಮಹಾನಗರ ಪಾಲಿಕೆ, ಜಿಲ್ಲಾಕೇಂದ್ರಗಳು
    • ಬಿ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ತಾಲೂಕು ಕೇಂದ್ರಗಳು
    • ಸಿ ಎ ಹಾಗೂ ಬಿ ವಲಯಗಳನ್ನು ಹೊರತಪಡಿಸಿದ ಪ್ರದೇಶಗಳು

    ವೇಟೇಜ್ ಸ್ಕೋರ್ ಸೂತ್ರಗಳು

    • ಸಿ ವಲಯದಲ್ಲಿನ ಸೇವಾವಧಿಯ ವರ್ಷಗಳನ್ನು 3ರಿಂದ ಗುಣಿಸಲಾಗುತ್ತದೆ. ಅಂದರೆ ಮೂರು ವರ್ಷ ಸೇವೆ ಸಲ್ಲಿಸಿದ್ದರೆ 9 ಅಂಕಗಳಾಗಲಿವೆ. ಬಿ ವಲಯದಲ್ಲಿ ಸೇವೆಯನ್ನು ಎರಡರಿಂದ ಗುಣಿಸಿದರೆ, ಎ ವಲಯದಲ್ಲಿನ ಸೇವೆಯನ್ನು ಅಷ್ಟೇ ವರ್ಷವೆಂದು ಪರಿಗಣಿಸಲಾಗುತ್ತದೆ.
    • ಆರು ತಿಂಗಳಿಗಿಂತ ಹೆಚ್ಚಿನ ಅವಧಿ ಒಂದು ವರ್ಷವೆಂದು ಪರಿಗಣಿಸಿದರೆ, ಅದಕ್ಕಿಂತ ಕಡಿಮೆ ಅವಧಿ ಶೂನ್ಯ ಎಂದು ಲೆಕ್ಕ.
    • ಹಿಂದಿನ ವರ್ಷದ ಡಿಸೆಂಬರ್​ವರೆಗೆ ಸಲ್ಲಿಸಿದ ಅವಧಿಯನ್ನು ಪರಿಗಣಿಸಲಾಗುತ್ತದೆ.
    • ವೇಟೇಜ್ ಅಂಕಗಳು ಸಮಾನವಾಗಿದ್ದಲ್ಲಿ ಸೇವೆಗೆ ಸೇರಿದ ಅವಧಿಯನ್ನು ಪರಿಗಣಿಸಲಾಗುತ್ತದೆ. ಇಲ್ಲಿಯೂ ಸಮಾನವಾಗಿದ್ದಲ್ಲಿ ಜನ್ಮದಿನ ನಿರ್ಣಾಯಕವಾಗಲಿದೆ.
    • ವೇಟೇಜ್ ಅಂಕಗಳನ್ನು ಜನವರಿಯ ಎರಡನೇ ಶುಕ್ರವಾರ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಬೇಕು. ಈ ಪ್ರಕ್ರಿಯೆಯನ್ನು ವರ್ಗಾವಣೆ ವೇಳಾಪಟ್ಟಿ ಪ್ರಕಟಿಸುವ ಮುನ್ನ ನಡೆಸಬೇಕು.

    ಮುಖ್ಯಾಂಶಗಳು

    • ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು
    • ಪ್ರಾಯೋಗಿಕ ತರಗತಿಯ ವಿಷಯಗಳಿಗೆ 160:1, ಸಾಮಾನ್ಯ ವಿಷಯಗಳಿಗೆ 320:1 ವಿದ್ಯಾರ್ಥಿ ಶಿಕ್ಷಕರ ಅನುಪಾತ ನಿಗದಿ
    • ಪ್ರಾಯೋಗಿಕ ತರಗತಿಯ ವಿಷಯಗಳಿಗೆ ವಾರಕ್ಕೆ 24 ತಾಸು, ಉಳಿದವುಗಳಿಗೆ 20 ತಾಸು ಕಾರ್ಯಭಾರ

    ವರ್ಗಾವಣೆ ಅವಧಿ: ಏಪ್ರಿಲ್ ಅಥವಾ ಮೇನಲ್ಲಿ ವರ್ಗಾವಣೆ ಕೈಗೊಳ್ಳುವಂತೆ ತಿಳಿಸಲಾಗಿದೆ. ಆದರೆ, ಖಚಿತ ಅವಧಿ ನಿರ್ಧರಿಸುವ ಅಧಿಕಾರವನ್ನು ವರ್ಗಾವಣೆ ಪ್ರಕ್ರಿಯೆ ನಿಯಂತ್ರಣಾಧಿಕಾರಿಗಳಿಗೆ ನೀಡಲಾಗಿದೆ. ಅವರೇ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ.

    ವಿಶೇಷ ಕೌನ್ಸೆಲಿಂಗ್: 2018-19ರ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಗೆ ಗುರಿಯಾದ ಉಪನ್ಯಾಸಕರಿಗೆ ವಿಶೇಷ ಕೌನ್ಸೆಲಿಂಗ್ ನಡೆಸುವಂತೆ ಸೂಚಿಸಲಾಗಿದೆ. ಇವರಿಗೆ ಹಿರಿತನ ನೀಡತಕ್ಕದ್ದು ಹಾಗೂ ಸ್ಥಳ ಆಯ್ಕೆಯಲ್ಲೂ ಹಿರಿತನ ಪಾಲಿಸತಕ್ಕದ್ದು. ಆದರೆ, ಇದು ಅವಕಾಶಗಳ ಲಭ್ಯತೆ ಹಾಗೂ ಹಲವು ಷರತ್ತುಗಳಿಗೆ ಒಳಪಟ್ಟಿದೆ.

    ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts