More

    ವಾಕರಸಾ ಸಂಸ್ಥೆಯ 73 ಸಿಬ್ಬಂದಿ ವರ್ಗಾವಣೆ

    ಹುಬ್ಬಳ್ಳಿ: ವಾಕರಸಾ ಸಂಸ್ಥೆಯ 67 ಚಾಲನಾ ಸಿಬ್ಬಂದಿ ಹಾಗೂ 6 ಜನ ಸಂಚಾರ ಸಿಬ್ಬಂದಿಯನ್ನು ಕೋರಿಕೆಯ ಮೇರೆಗೆ ವರ್ಗಾವಣೆ ಮಾಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
    ಸಂಸ್ಥೆಯ ವರ್ಗಾವಣೆ ಮಾರ್ಗಸೂಚಿಗಳನ್ವಯ ಕ್ರಮ ಜರುಗಿಸಲಾಗಿದೆ. ಇದರಲ್ಲಿ ಅರ್ಹ ಪರಸ್ಪರ/ಕೋರಿಕೆ, ಪತಿ/ಪತ್ನಿ ಹಾಗೂ ವೈದ್ಯಕೀಯ ಪ್ರಕರಣಗಳನ್ನು ಪರಿಗಣಿಸಲಾಗಿದೆ. ಸಾಮಾನ್ಯ ಕೋರಿಕೆ ಅರ್ಜಿಗಳಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ವಿಭಾಗಗಳಲ್ಲಿ ಅತಿ ಹೆಚ್ಚಿನ ಚಾಲನಾ ಸಿಬ್ಬಂದಿ ಕೊರತೆ ಇರುವುದರಿಂದ ಈ ವಿಭಾಗಗಳಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಕೋರಿದ ಅರ್ಜಿಗಳನ್ನು ಹಾಗೂ ಬಾಗಲಕೋಟೆ ಮತ್ತು ಗದಗ ವಿಭಾಗಗಳಲ್ಲಿ ಪ್ರಸ್ತುತ ಚಾಲನಾ ಸಿಬ್ಬಂದಿ ಕೊರತೆ/ಅವಶ್ಯಕತೆ ಇಲ್ಲದಿರುವುದರಿಂದ ಈ ವಿಭಾಗಗಳಿಗೆ ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಿರುವುದಿಲ್ಲ. ಚಿಕ್ಕೋಡಿ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಹೆಚ್ಚಿನ ಕೊರತೆ ಇರುವುದರಿಂದ ಚಿಕ್ಕೋಡಿ ವಿಭಾಗದಿಂದ ಬೆಳಗಾವಿ ವಿಭಾಗಕ್ಕೆ ವರ್ಗಾವಣೆ ಕೋರಿದ ಅರ್ಜಿಗಳನ್ನು ಪರಿಗಣಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಕೋರಿಕೆ ವರ್ಗಾವಣೆಗೆ ಪರಿಗಣಿಸದಿರುವ ಸಿಬ್ಬಂದಿಯ ಅರ್ಜಿಯನ್ನು ಮುಂಬರುವ ದಿನಗಳಲ್ಲಿ ಚಾಲನಾ ಸಿಬ್ಬಂದಿಯ ಕೊರತೆ/ಹೆಚ್ಚಳ ಸ್ಥಿತಿಗತಿ ಪರಿಗಣಿಸಿ ಕ್ರಮಕೈಗೊಳ್ಳಲಾಗುವುದು. ಪ್ರಸ್ತುತ ವರ್ಗಾವಣೆಗಾಗಿ ಪದೇ ಪದೆ ಅರ್ಜಿಗಳನ್ನು ಸಲ್ಲಿಸದಿರುವಂತೆ ಮತ್ತು ಮುಂದಿನ ಸಾಮಾನ್ಯ ವರ್ಗಾವಣೆಯ ಅವಧಿಯವರೆಗೆ ಕಾಯಲು ಹಾಗೂ ಸಂಸ್ಥೆಯೊಂದಿಗೆ ಸಹಕರಿಸಲು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts