More

    ಪ್ರಚಾರಕ್ಕೆ ಸೀಮಿತವಾಗದಿರಲಿ ಶರಣರ ಚಿಂತನೆ

    ಬೀರೂರು: ನಿಜ ಶರಣರ ಚಿಂತನೆಗಳು ಪ್ರಚಾರಕ್ಕೆ ಸೀಮಿತಗೊಳ್ಳುತ್ತಿವೆ ಎಂದು ಶಾಸಕ ಬೆಳ್ಳಿಪ್ರಕಾಶ್ ವಿಷಾದಿಸಿದರು.

    ತರಳಬಾಳು ಕಲ್ಯಾಣಮಂದಿರದಲ್ಲಿ ಸೋಮವಾರ ತಾಲೂಕು ನೊಳಂಬ ಸಮಾಜ ನೌಕರರ ಸಂಘ, ಮಲ್ಲಿಗೆ ಬಳಗದಿಂದ ಆಯೋಜಿಸಿದ್ದ 848ನೇ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನುಡಿದಂತೆ ನಡೆದ ಅನುಭಾವಿಗಳ ಬದುಕಿನ ಮೌಲ್ಯಗಳನ್ನು ಅನುಸರಿಸಿದರೆ ಆದರ್ಶ ಸಮಾಜ ನಿರ್ವಣವಾಗುತ್ತದೆ. ವಚನಕಾರರು, ಅನುಭವ ಮಂಟಪ ಕಟ್ಟಿದ ಬಸವೇಶ್ವರರು ಮತ್ತು ಶ್ರೀ ಸಿದ್ದರಾಮೇಶ್ವರರ ಕ್ರಿಯಾಶೀಲ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ರಂಭಾಪುರಿ ಶಾಖಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಧರ್ಮ ಭೂಮಿಯಲ್ಲಿ ಕರ್ಮ ಯೋಗಿಯಾಗಿ ಮನುಕುಲದ ಒಳಿತಿಗೆ ದೈವಾಂಶ ಸಂಭೂತರಂತೆ ಕೆಲಸ ಮಾಡಿದವರು ಸಿದ್ದರಾಮೇಶ್ವರರು. ಜಯಂತಿ ಆಚರಣೆ ಜತೆ ಜನಪರ ಕೆಲಸಗಳಿಗೂ ಮಹತ್ವ ಸಿಗಬೇಕು. ಶರಣರ ತತ್ವ-ಸಿದ್ಧಾಂತಗಳನ್ನು ಕಾಯಕರೂಪದಲ್ಲಿ ತೋರಿಸಿ ನಿಜ ಶರಣರಾಗಬೇಕು ಎಂದು ಸಲಹೆ ನೀಡಿದರು.

    ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಸಾಮಾಜಿಕ ಪರಿವರ್ತನೆ ಮತ್ತು ಉತ್ತಮ ಬದುಕಿನ ಮಾರ್ಗ ತೋರಿಸಿದ ದಾರ್ಶನಿಕ ಸಿದ್ದರಾಮೇಶ್ವರರು ಸರ್ವಕಾಲಕ್ಕೂ ಸಲ್ಲುವ ಮಹಾ ಮಾನವತಾವಾದಿ. ಬುದ್ಧಿಜೀವಿಗಳು ಸಾಕಷ್ಟಿದ್ದರೂ ಸಾಮಾನ್ಯ ಜ್ಞಾನದ ಕೊರತೆ ನಮ್ಮ ವಿಚಾರಶೀಲ ಚಿಂತನೆಗಳನ್ನು ಮಸುಕಾಗಿಸಿದೆ. ನಮ್ಮ ಜವಾಬ್ದಾರಿಗಳಿಂದ ವಿಮುಖರಾಗುವಂತೆ ತಪ್ಪು ನಿರ್ಧಾರಕ್ಕೆ ಒಳಗಾಗುವ ಅಪಾಯ ಜನನಾಯಕರಿಗೆ ಎದುರಾಗಲಿದೆ. ನಿಜ ಶರಣರ ಚಿಂತನೆಗಳು ಪ್ರಚಾರಕ್ಕೆ ಸೀಮಿತವಾಗುತ್ತಿವೆ ಎಂದು ವಿಷಾದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts