More

    VIDEO: ದೇಶದ್ರೋಹಿ ಅಮೂಲ್ಯಾಗೆ ಹಮ್​ ತುಮ್ಹಾರೆ ಸಾಥ್​ ಹೇ ಎಂದ ದೇಶದ್ರೋಹಿಗಳು: ಅವಳ ಹಿಂದಿದೆಯಾ ದೊಡ್ಡ ಗುಂಪು?

    ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ಪಾಕ್​ ಪರ ಘೋಷಣೆ ಕೂಗಿ ಪೊಲೀಸರ ವಶವಾದ ಅಮೂಲ್ಯಾ ಕುರಿತಾಗಿ ಇಂದು ಭಾರೀ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಮೂಲ್ಯಾಳನ್ನು ಜೈಲಿಗೆ ಕರೆದೊಯ್ಯುತ್ತಿರುವಾಗಿ ಕೆಲ ದೇಶದ್ರೋಹಿಗಳು ಆಕೆಗೆ ಹಮ್​ ತುಮ್ಹಾರೆ ಸಾಥ್​ ಹೇ ಎಂದಿರುವ ವಿಡಿಯೋ ವೈರಲ್​ ಆಗಿದೆ.

    ನಿನ್ನೆ ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಪ್ರತಿಭಟನೆಯ ವೇದಿಕೆ ಹತ್ತಿದ್ದ ಅಮೂಲ್ಯ “ಪಾಕಿಸ್ತಾನ್​ ಜಿಂದಾಬಾದ್​” ಎಂದು ಘೋಷಣೆ ಹಾಕಿದ್ದಳು. ತಕ್ಷಣವೇ ವೇದಿಕೆ ಮೇಲಿದ್ದವರು ಆಕೆಯ ಕೈಯಿಂದ ಮೈಕನ್ನು ಕಿತ್ತುಕೊಂಡರು. ದೇಶದ್ರೋಹಿ ಘೋಷಣೆ ಕೂಗಿದ ಸಲುವಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫ್ರೀಡಂ ಪಾರ್ಕ್​ನಿಂದ ಪೊಲೀಸ್​ ಠಾಣೆಗೆ ಅಮೂಲ್ಯಾಳನ್ನು ಕರೆದೊಯ್ಯುವ ಸಮಯದಲ್ಲಿ ಕೆಲ ದೇಶದ್ರೋಹಿಗಳು ಬೈಕಿನಲ್ಲಿ ಪೊಲೀಸ್​ ಜೀಪಿನ ಹಿಂದೆ ಹೋಗಿದ್ದಾರೆ. ಜೀಪಿನ ಹತ್ತಿರ ಬಂದು ಹಮ್​ ತುಮ್ಹಾರೆ ಸಾತ್​ ಹೇ ಎಂದು ಘೋಷಣೆ ಕೂಗಿದ್ದಾರೆ. ಅದಕ್ಕೆ ಒಳಗಿನಿಂದ ಆಕೆ ಪ್ರತಿಯಾಗಿ ಏನೋ ಹೇಳಿದ್ದಾಳೆ.

    ಜೈಲಿಗೆ ಹೋದರೂ ಬುದ್ಧಿ ಬಾರದ ಅಮೂಲ್ಯಾ ಮತ್ತು ಆಕೆಯ ದೇಶದ್ರೋಹಿ ಸಂಗಡಿಗರ ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

    ದೇಶದ್ರೋಹಿ ಅಮೂಲ್ಯಾಗೆ ಹಮ್​ ಥುಮಾರೇ ಸಾಥ್​ ಹೇ ಎಂದ ದೇಶದ್ರೋಹಿಗಳು: ಅವಳ ಹಿಂದಿದೆಯಾ ದೊಡ್ಡ ಗುಂಪು?

    ದೇಶದ್ರೋಹಿ ಅಮೂಲ್ಯಾಗೆ ಹಮ್​ ಥುಮಾರೇ ಸಾಥ್​ ಹೇ ಎಂದ ದೇಶದ್ರೋಹಿಗಳು: ಅವಳ ಹಿಂದಿದೆಯಾ ದೊಡ್ಡ ಗುಂಪು?

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಫೆಬ್ರವರಿ 20, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts