More

    ಜಾನುವಾರುಗಳಿಗೂ ಸಮರ್ಪಕ ಆರೋಗ್ಯ ಸೇವೆ ಅಗತ್ಯ

    ವಿಜಯವಾಣಿ ಸುದ್ದಿಜಾಲ ತೂಬಗೆರೆ
    ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ, ಲಸಿಕೆ ಅವಶ್ಯವಿದ್ದಲ್ಲಿ ಕೃತಕ ಗರ್ಭಧಾರಣೆ ಸೇವೆ ನೀಡುವುದು ಪ್ರಸ್ತುತದಲ್ಲಿ ಅತ್ಯವಶ್ಯಕ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹನುಮಂತರಾಯ ಅಭಿಪ್ರಾಯಪಟ್ಟರು.
    ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಪಶು ವೈದ್ಯ ಇಲಾಖೆಯಿಂದ ಮೈತ್ರಿ ಶಿಬಿರಾರ್ಥಿಗಳಿಗೆ ಹಮ್ಮಿಕೊಂಡಿರುವ ಮೂರು ತಿಂಗಳ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಿಂದ ಆಯ್ದ 24 ಶಿಬಿರಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಶಿಬಿರಾರ್ಥಿಗಳು, ಗೋವುಗಳ ಸೇವೆ ಶ್ರೇಷ್ಠವಾದದ್ದು ಎಂಬ ಭಾವ ತೋರಬೇಕು. ರೈತರ ಆರ್ಥಿಕ ಸಧೃಡತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
    ಜಿಲ್ಲಾ ಪಶು ವೈದ್ಯ ಇಲಾಖೆ ಉಪ ನಿರ್ದೇಶಕ ಡಾ.ಎನ್.ಜಗದೀಶ್ ಕುಮಾರ್ ಮಾತನಾಡಿ, ಮೈತ್ರಿ ಶಿಬಿರಾರ್ಥಿಗಳು ಮೂರು ತಿಂಗಳ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಸುಗಳಿಗೆ ಕೃತಕ ಗರ್ಭಧಾರಣೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts