More

    ರೈಲು ಸಂಚಾರ ವಿಸ್ತರಣೆ

    ಹುಬ್ಬಳ್ಳಿ : ಯಶವಂತಪುರ -ಮುರ್ಡೆಶ್ವರ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯ ಅವಧಿ ವಿಸ್ತರಿಸಲಾಗಿದೆ.

    ಯಶವಂತಪುರ ಮುರ್ಡೆಶ್ವರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲುಗಳ ಸೇವೆಯ ಅವಧಿಯನ್ನು ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ರೈಲುಗಳ ವೇಳಾಪಟ್ಟಿ, ನಿಲ್ದಾಣ, ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

    ಪ್ರತಿ ಶನಿವಾರ ಯಶವಂತಪುರ ನಿಲ್ದಾಣದಿಂದ ಹೊರಡುವ ಈ ರೈಲು ಸೇವೆಯನ್ನು ಆ. 5 ರಿಂದ 26 ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಈ ರೈಲು ಸಂಚಾರವನ್ನು ಜು. 29ರವರೆಗೆ ನಡೆಸಲು ಸೂಚಿಸಲಾಗಿತ್ತು.

    ಪ್ರತಿ ಭಾನುವಾರ ಮುರ್ಡೆಶ್ವರದಿಂದ ಸಂಚರಿಸುವ ಈ ರೈಲು ಸೇವೆಯನ್ನು ಆ. 6 ರಿಂದ 27ರವರೆಗೆ ವಿಸ್ತರಿಸಲಾಗುತ್ತಿದೆ. ಈ ಮೊದಲು ಜು. 30 ರವರೆಗೆ ಈ ರೈಲು ಸಂಚರಿಸಲು ತೀರ್ವನಿಸಲಾಗಿತ್ತು ಎಂದು ನೈಋತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts