More

    ರೈಲಿನಲ್ಲಿ ಸಂಚರಿಸುತ್ತಿದ್ದ ಕರೊನಾ ಸೋಂಕಿತರನ್ನು ಕೆಳಗಿಸಿ ಬೋಗಿ ಸ್ವಚ್ಛಗೊಳಿಸಿದ ಅಧಿಕಾರಿಗಳು

    ನವದೆಹಲಿ: ಕ್ವಾರಂಟೈನ್​ಲ್ಲಿ ಇರುವಂತೆ ಸೂಚಿಸಿದ್ದ ವ್ಯಕ್ತಿಗಳು ಸೂಚನೆ ಧಿಕ್ಕರಿಸಿ ಹೊರಗಡೆ ಓಡಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
    ದೆಹಲಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರಾಜಧಾನಿ ಎಕ್ಸ್​ಪ್ರೆಸ್ ರೈಲಿ​ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಕರೊನಾ ಸೋಂಕಿತ ಪ್ರಯಾಣಿಕರನ್ನು ಕಾಜಿಪೇಟೆ ರೈಲು ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳು ರೈಲಿನಿಂದ ಕೆಳಗಿಳಿಸಿ ರೈಲು ಬೋಗಿಗಳನ್ನು ಸ್ವಚ್ಛಗೊಳಿಸಿದ್ದಾರೆ.

    ಇಬ್ಬರು ಪ್ರಯಾಣಿಕರು ಕಳೆದ ವಾರ ದುಬೈನಿಂದ ದೆಹಲಿಗೆ ಹಿಂದಿರುಗಿದ್ದರು. ಇವರನ್ನು ತಪಾಸಣೆ ನಡೆಸಿದ ಅಧಿಕಾರಿಗಳು ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಸಮುದಾಯದಿಂದ ಪ್ರತ್ಯೇಕವಾಗಿರುವಂತೆ ಸೂಚಿಸಿದ್ದರು. ಹೀಗಿದ್ದರೂ ಇವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಾಹಿತಿ ಪಡೆದ ಅಧಿಕಾರಿಗಳು ಅವರನ್ನು ಪ್ರತ್ಯೇಕಗೊಳಿಸಿದ್ದಾರೆ. ಅಲ್ಲದೆ ಇವರ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲು ರೈಲ್ವೆ ಪೊಲೀಸರು ಮುಂದಾಗಿದ್ದಾರೆ.

    ಮುಂಬೈನಿಂದ ಜಬಲ್​ಪುರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ನಾಲ್ವರು ಪ್ರಯಾಣಿಕರಲ್ಲಿ ಕರೊನಾ ವೈರಸ್​ ಸೋಂಕು ಹರಡಿರುವುದು ಪತ್ತೆಯಾಗಿದೆ. ದೆಹಲಿಯಿಂದ ರಾಮಗುಂಡಂಗೆ ಸಂಚರಿಸುತ್ತಿದ್ದ ರೈಲಿನಲ್ಲಿ 8 ಮಂದಿ ಪ್ರಯಾಣಿಕರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

    ಸಿಂಗಾಪುರದಿಂದ ದೆಹಲಿಗೆ ಬಂದಿದ್ದ 6 ಮಂದಿ ಪ್ರಯಾಣಿಕರಿಗೆ ಸೋಂಕು ಇರುವುದು ಪತ್ತೆಯಾಗಿ ಅವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿತ್ತು. ಇವರು ಕೂಡ ಸೂಚನೆ ಉಲ್ಲಂಘಿಸಿ ಸೌರಾಷ್ಟ್ರ ಎಕ್ಸ್​ಪ್ರೆಸ್​ ರೈಲಿನಲ್ಲಿ ಸಂಚರಿಸುತ್ತಿದ್ದರು. ಅಧಿಕಾರಿಗಳು ಪತ್ತೆ ಅವರನ್ನು ರೈಲಿನಿಂದ ಕೆಳಗಿಳಿಸಿ ಪ್ರತ್ಯೇಕ ವಾರ್ಡ್​ಗಳಲ್ಲಿ ಇರುವಂತೆ ಸೂಚಿಸಿದ್ದಾರೆ.

    ಕರೊನಾ ವೈರಸ್​ ಸೋಂಕಿತರು ಸರ್ಕಾರದ ಸೂಚನೆ ಧಿಕ್ಕರಿಸಿ ಸಮುದಾಯದಲ್ಲಿ ಬೆರೆಯುತ್ತಿರುವುದು ಅಪರಾಧವಾಗಿದ್ದು, ಅವರನ್ನು ಬಂಧಿಸಿ 6 ತಿಂಗಳ ಕಾಲ ಜೈಲಿನಲ್ಲಿ ಇಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. (ಏಜೆನ್ಸೀಸ್​)

    ಕರೊನಾ ವೈರಸ್ ಎಫೆಕ್ಟ್​; ರಣರಂಗವಾಯ್ತು ಕೋಲ್ಕತ್ತ ಡಂ ಡಂ ಜೈಲು, ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts