More

    ಕಿರಿದಾದ ಸೇತುವೆ ಮೇಲೆ ವಾಹನ ಸಿಲುಕಿ ಟ್ರಾಫಿಕ್ ಜಾಮ್


    ಚಾಮರಾಜನಗರ : ಪಟ್ಟಣದ ಮುಡಿಗುಂಡ ಸೇತುವೆಯ ಮೇಲೆ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಗೂಡ್ಸ್ ಆಟೋವೊಂದು ಸಿಲುಕಿ ವಾಹನ ದಟ್ಟನೆ ಉಂಟಾಗಿತ್ತು.


    ರಾತ್ರಿ 7.20 ರ ಸಮಯದಲ್ಲಿ ಕೊಳ್ಳೇಗಾಲದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಹಾಗೂ ಉತ್ತಂಬಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಬರುತ್ತಿದ್ದ ಗೂಡ್ಸ್ ಆಟೋವೊಂದು ಏಕಕಾಲದಲ್ಲಿ ಮುಡಿಗುಂಡ ಸೇತುವೆ ಮೇಲೆ ಸಂಚರಿಸಿದ್ದು, ಕಿರಿದಾದ ಸೇತುವೆ ಹಿನ್ನೆಲೆಯಲ್ಲಿ ಎರಡು ವಾಹನಗಳು ಸೇತುವೆ ದಾಟಲಾಗದೆ ಸಿಲುಕಿದವು.


    ಈ ವೇಳೆ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ವಾಹನ ದಟ್ಟನೆ ಉಂಟಾಗಿ ಸಾಲಾಗಿ ವಾಹನಗಳು ನಿಂತು ಸಂಚಾರಕ್ಕೆ ತೊಂದರೆ ಯಾಯಿತು. ಅದಲ್ಲದೆ ಆ ಸಮಯಕ್ಕೆ ಮೈಸೂರು ಮಾರ್ಗದಿಂದ ಬಂದ ಆಂಬುಲೆನ್ಸ್ ಸಂಚಾರಕ್ಕೂ ಸಮಸ್ಯೆಯಾಯಿತು. ಈ ವೇಳೆ ಸಾರ್ವಜನಿಕರು ಎರಡು ವಾಹನಗಳ ಚಾಲಕರ ಮೇಲೆ ಅಕ್ರೋಶ ಹೊರಹಾಕಿದ ಪ್ರಸಂಗವೂ ನಡೆಯಿತು. ನಂತರ ಬಸ್‌ಅನ್ನು ಹಿಂದಕ್ಕೆ ತೆಗೆದು ಆಟೋ ಹೋಗಲು ಅವಕಾಶ ಮಾಡಿದ ಬಳಿಕ ಸಂಚಾರ ಸುಗಮವಾಯಿತು.

    ಸೇತುವೆ ಮೇಲೆ ಒಂದು ಬಸ್ ಸಂಚರಿಸುವಷ್ಟು ಮಾತ್ರ ಸ್ಥಳಾವಕಾಶವಿದೆ. ಅದರೆ, ಚಾಲಕರು ನಾ ಮುಂದು, ತಾ ಮುಂದು ಎಂದು ಏಕಕಾಲದಲ್ಲಿ ಎರಡು ವಾಹನಗಳು ಸಂಚಾರ ಮಾಡುವುದರಿಂದ ಆಗಾಗ ಸೇತುವೆ ಮೇಲೆ ವಾಹನದಟ್ಟನೆಯಾಗಿ ಪ್ರಯಾಣಿಕರು ಪ್ರಯಾಸ ಪಡುವ ಪರಿಸ್ಥಿತಿ ಉಂಟಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts