More

    ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್

    ಮಂಗಳೂರು: ವಾರಾಂತ್ಯ ಕರ್ಫ್ಯೂ ಮುಕ್ತಾಯವಾದ ಕೂಡಲೇ ಮಂಗಳೂರು ನಗರದಾದ್ಯಂತ ಸೋಮವಾರ ವಾಹನ ದಟ್ಟಣೆ ಕಾಣಿಸಿಕೊಂಡಿದೆ.
    ಸೋಮವಾರದಿಂದ ಶುಕ್ರವಾರ ತನಕ ಬೆಳಗ್ಗೆ 7ರಿಂದ ಮಧ್ಯಾಹ್ನ 2ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಈ ವಿನಾಯಿತಿ ಬಳಸಿಕೊಂಡ ಸಾರ್ವಜನಿಕರು ಸ್ವಂತ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವುದು ಕಂಡುಬಂತು.

    ಮಧ್ಯಾಹ್ನ ಎರಡು ಗಂಟೆ ಬಳಿಕವೂ ನಗರದಲ್ಲಿ ವಾಹನ ದಟ್ಟಣೆ ಮುಂದುವರಿದಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿ ನಗರದ ವಿವಿಧೆಡೆ ನಡೆಯುತ್ತಿರುವುದು, ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ದಿನಸಿ ಅಂಗಡಿ, ಮೀನು, ಮಾಂಸ ಸಹಿತ ಆವಶ್ಯಕ ಸಾಮಗ್ರಿಗಳ ಅಂಗಡಿ ಕೂಡ ಬಂದ್ ಆಗಿರುವುದು ನಗರದಲ್ಲಿ ಹೆಚ್ಚಿನ ವಾಹನ ದಟ್ಟಣೆಗೆ ಕಾರಣ.

    ನಗರದ ಪಿವಿಎಸ್ ವೃತ್ತ, ಲೈಟ್‌ಹೌಸ್, ಸಿಟಿ ಸೆಂಟರ್ ಸಮೀಪ ಸಹಿತ, ಶಾರದಾ ವಿದ್ಯಾಲಯ ಮುಂಭಾಗದ ರಸ್ತೆ ಸಹಿತ ಹಲವೆಡೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts