More

    ಯುವನಿಧಿಗೆ ಸಂಚಾರ ‘ಶಕ್ತಿಗೆ ಸಂಕಷ್ಟ’

    ರಾಣೆಬೆನ್ನೂರ: ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವನಿಧಿ ಅನುಷ್ಠಾನಕ್ಕೆ ಹಾವೇರಿ ವಿಭಾಗದಿಂದ 100ಕ್ಕೂ ಅಧಿಕ ಬಸ್ ಹೊರಟ ಕಾರಣ ಜಿಲ್ಲೆಯ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಜತೆಗೆ ಮೋಟೆಬೆನ್ನೂರಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

    ಪ್ರಯಾಣಿಕರು ಸುಸ್ತು ಹೊಡೆದಿದ್ದಾರೆ. ಇದರಿಂದ ಶುಕ್ರವಾರ ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಜನ ಗಿಜಿಗುಡುತ್ತಿದ್ದ ದೃಶ್ಯಗಳು ಕಂಡು ಬಂತು.
    ಹುಬ್ಬಳ್ಳಿ, ಹರಿಹರ, ದಾವಣಗೆರೆ, ಹಾವೇರಿ ಹಾಗೂ ಗ್ರಾಮಿಣ ಭಾಗಗಳಲ್ಲಿ ಸಂಚರಿಸುವ ಬಸ್​ಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುತ್ತಿರುವುದು ಕಂಡು ಬಂದಿತು.


    ಹಾವೇರಿ, ರಾಣೆಬೆನ್ನೂರ ತಾಲೂಕಿನಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬಸ್​ನಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಾರೆ ಇನ್ನು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಆದರೆ, ಶುಕ್ರವಾರ ಕಡಿಮೆ ಪ್ರಮಾಣದಲ್ಲಿ ಬಸ್​ಗಳು ಸಂಚಾರ ನಡೆಸುತ್ತಿರುವ ಪರಿಣಾಮ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು.


    ಶಾಲಾ ಕಾಲೇಜುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ವಿದ್ಯಾರ್ಥಿಗಳು ಎರಡು ತಾಸು ಬಸ್​ಗಾಗಿ ಕಾಯ್ದು ನಿಂತರೂ ಬಸ್ ಬರಲಿಲ್ಲ. ಇದರಿಂದ ಕಾಲೇಜ್​ಗೆ ತೆರಳಿದರೆ ಮರಳಿ ಬರುವುದು ಕಷ್ಟವಾಗುತ್ತದೆ ಎಂದು ಅರಿತು ಬೇಸರದಿಂದ ಮನೆಗೆ ಮರಳಿದರು.


    ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್​ಗಳು ಸಹ ಕಡಿಮೆ ಇರುವುದು ಕಂಡು ಬಂದಿತು. ಗ್ರಾಮಿಣ ಭಾಗದ ಜನರು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುತ್ತಿರುವುದು ಕಂಡು ಬಂದಿತು. ಬಸ್ ಸಂಚಾರ ಕಡಿಮೆಯಾಗಿರುವುದನ್ನು ಕಂಡ ಖಾಸಗಿ ವಾಹನದವರು ಹುಬ್ಬಳ್ಳಿ, ಶಿಕಾರಿಪುರ, ಹಾವೇರಿ, ದಾವಣಗೆರೆಗೆ ಹೆಚ್ಚಿನ ಹಣ ಪಡೆದು ಪ್ರಯಾಣಿಕರ ಸಾಗಾಟ ನಡೆಸಿದರು.


    ಹಾವೇರಿ ವಿಭಾಗದಲ್ಲಿ 492 ಬಸ್​ಗಳು ನಿತ್ಯ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ 70 ಬಸ್​ಗಳನ್ನು ಯುವನಿಧಿಗೆ ಅರ್ಜಿ ಸಲ್ಲಿಸಿದ ಯುವಕರಿಗಾಗಿ ವ್ಯವಸ್ಥೆ ಮಾಡಲಾಗಿದೆ. ಇನ್ನು 30 ಬಸ್​ಗಳನ್ನು ಶಿವಮೊಗ್ಗ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ. ಒಟ್ಟು 100 ಬಸ್​ಗಳನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. | ಶಶಿಧರ ವಿ.ಎಂ., ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts