More

    ಶಿಕ್ಷಣ ಸಹಾಯಧನ ಬಿಡುಗಡೆ ಮಾಡಿ

    ಕಾರವಾರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದರು.

    2021-22 ನೇ ಸಾಲಿನಿಂದ ಸುಮಾರು 1 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಲ್ಲಿಸಿದ ಸಹಾಯಧನ ಇದುವರೆಗೂ ಬಿಡುಗಡೆಯಾಗಿಲ್ಲ ಅದನ್ನು ತಕ್ಷಣ ಬಿಡುಗಡೆ ಮಾಡಬೇಕು. 2007 ನೇ ಸಾಲಿನಲ್ಲಿ ಆನ್‌ಲೈನ್‌ನಲ್ಲಿ ಮಂಜೂರಾದ ಫಲಾನುಭವಿಗಳ ಗುರುತಿನ ಚೀಟಿ ಈ ವರ್ಷದಿಂದ ಆನ್‌ಲೈನ್‌ನಲ್ಲಿ ನವೀಕರಣವಾಗುತ್ತಿಲ್ಲ. ನಾವು ಇದುವರೆಗೆ ಹಲವು ಬಾರಿ ಸಂಘದಿಂದ ಮೌಖಿಕವಾಗಿ ತಿಳಿಸಿ, ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಆ ಸಮಸ್ಯೆ ಬಗೆಹರಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿದ್ದ 10 ಸೌಲಭ್ಯಗಳನ್ನು ಕಡಿತ ಮಾಡಲು ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಭಾರತ ದೇಶದಲ್ಲಿ ಒಟ್ಟು 10 ರಾಷ್ಟ್ರೀಯ ಟ್ರೇಡ್ ಯೂನಿಯನ್‌ಗಳಿವೆ. ಆದರೆ, ರಾಜ್ಯ ಸರ್ಕಾರದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಐಎನ್‌ಟಿಯುಸಿ ಹೊರತುಪಡಿಸಿ ಉಳಿದೆಲ್ಲ ಮಂಡಳಿಗಳನ್ನು ಕಡೆಗಣಿಸಿದೆ. ಭಾರತೀಯ ಮಜ್ದೂರ್ ಸಂಘವು ರಾಜ್ಯದಲ್ಲಿ ಅತಿ ದೊಡ್ಡ ಕಾರ್ಮಿಕರ ಸಂಘಟನೆಯಾಗಿದೆ. ಇದರಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈ ಸಂಘಟನೆಗೂ ಸ್ಥಾನ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸಂಘನೆಗಳಿಗೆ ಮಾತ್ರ ನೋಂದಣಿ ಹಾಗೂ ಇತರ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಲಾಯಿತು. ಸಂಘಟನೆಯ ಪ್ರಾಂತ ಅಧ್ಯಕ್ಷ ಚಿಂತಾಮಣಿ ಕೊಡಳ್ಳಿ, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ, ಸಹ ಕಾರ್ಯದರ್ಶಿ ಉಮೇಶ ನಾಯ್ಕ, ಸದಸ್ಯ ಈಶ್ವರ ನಾಯ್ಕ, ಹೊನ್ನಾವರ ತಾಲೂಕು ಅಧ್ಯಕ್ಷ ಬಾಲಚಂದ್ರ ಕೆಸರೋಡಿ, ಖಜಾಂಚಿ ಸೀತಾರಾಮ ನಾಯ್ಕ, ರಾಮೇಶ್ವರ ಕಂಬಿ, ದುಂಡಪ್ಪ ಬಂಡಿವಡ್ಡರ್ ಉಪಸ್ಥಿತರಿದ್ದರು. ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ರಾಜು ಪೂಜಾರ ಮನವಿ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts