More

    ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ

    ಹಾನಗಲ್ಲ: ಜನತಾ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘಿಸಿ ಪಟ್ಟಣದ ಕಲ್ಲಭಾವಿ ಕ್ರಾಸ್ ಬಳಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದ ಇಬ್ಬರು ಮಾಲೀಕರ ವಿರುದ್ಧ ಹಾನಗಲ್ಲ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

    ಅಗತ್ಯ ಸೇವೆಗಳಾದ ಹಣ್ಣು-ತರಕಾರಿ ದಿನಸಿ ಅಂಗಡಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನ 12ರವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಜುವೆಲರಿ, ಸ್ಟೆಷನರಿ ಅಂಗಡಿ ತೆರೆಯಲು ಅವಕಾಶವಿಲ್ಲದಿದ್ದರೂ, ವಿನಾಯಕ ಜುವೆಲರಿ ಮತ್ತು ಮುಂಬಯಿ ಫ್ಯಾನ್ಸಿ ಸ್ಟೋರ್ಸ್​ನಲ್ಲಿ ವ್ಯಾಪಾರ ನಡೆಸಲಾಗುತ್ತಿತ್ತು. ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ ಅವರು ಎರಡೂ ಅಂಗಡಿ ಬಂದ್ ಮಾಡಿಸಿ, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಪವನ ದಾಬಾ ಮೇಲೆ ದಾಳಿ, ಅಕ್ರಮ ಮದ್ಯ ವಶ

    ತಾಲೂಕಿನ ಗೆಜ್ಜಿಹಳ್ಳಿ ಸಮೀಪ ಗುರುವಾರ ರಾತ್ರಿ 10.30ರ ಸುಮಾರಿಗೆ ತೆರೆದಿದ್ದ ಪವನ ದಾಬಾ ಮೇಲೆ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ನೇತೃತ್ವದ ಕಂದಾಯ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ ಅಂದಾಜು 7550 ರೂಪಾಯಿ ಮೌಲ್ಯದ 8.46 ಲೀ ಮದ್ಯ, 16.27 ಲೀಟರ್ ಬಿಯರ್ ವಶಪಡಿಸಿಕೊಂಡಿದ್ದಾರೆ. ದಾಬಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ಗುತ್ತಲದಲ್ಲಿ ಅನಗತ್ಯ ಸಂಚರಿಸುತ್ತಿದ್ದವರ ಬೈಕ್ ವಶ

    ಗುತ್ತಲದಲ್ಲಿ ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಬೈಕ್​ನಲ್ಲಿ ಸಂಚರಿಸುತ್ತಿದ್ದ 50ಕ್ಕೂ ಅಧಿಕ ಬೈಕ್​ಗಳನ್ನು ಪಿಎಸ್​ಐ ಸಿದ್ಧಾರೂಢ ಬಡಿಗೇರ ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಪೊಲೀಸರು, ಕಳೆದ ಕೆಲವು ದಿನಗಳಿಂದ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರದಿಂದಲೇ ಕಠಿಣ ಕ್ರಮ ಕೈಗೊಳ್ಳುತ್ತಿರುವ ಪೊಲೀಸರು, ಮಾಸ್ಕ್ ಇಲ್ಲದೆ ಸಂಚರಿಸುವವರಿಗೆ 100 ರೂಪಾಯಿ ದಂಡ ಹಾಕಿದರು. ಇದರ ಪರಿಣಾಮ ಶುಕ್ರವಾರ ಬಹುತೇಕರು ಮಾಸ್ಕ್ ಧರಿಸಿ ಸಂಚರಿಸಿದರು. ಆದರೂ, ಕೆಲ ಸವಾರರು ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದರು. ಇಂತಹ ಸವಾರರ ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದರು. ಕರೊನಾ ಮಾರ್ಗಸೂಚಿ ಪಾಲಿಸದವರ ವಿರುದ್ದ ಕಠಿಣ ಕ್ರಮ ಅನಿವಾರ್ಯ ಎಂದು ಪಿಎಸ್​ಐ ಸಿದ್ಧಾರೂಢ ಬಡಿಗೇರ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts