More

    ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ…! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು

    ನವದೆಹಲಿ: ಕಡಿದಾದ ರಸ್ತೆಗಳಲ್ಲಿ, ಘಟ್ಟ ಪ್ರದೇಶದಲ್ಲಿ ಸಂಚಾರಕ್ಕೆ ವಿಶೇಷ ವಾಹನಗಳ ಅಗತ್ಯವಿದೆ. ಆದರೆ, ಮೆಟ್ಟಿಲುಗಳಿರುವ ಬೆಟ್ಟವನ್ನು ಅದ್ಯಾವ ವಾಹನ ತಾನೇ ಏರಬಲ್ಲುದು…!

    ಈ ಪ್ರಶ್ನೆಯನ್ನು ಉತ್ತರಾಖಂಡದ ಕೇದಾರನಾಥ್​ ನಿವಾಸಿಗಳಿಗೆ ಕೇಳಿದರೆ ಖಂಡಿತ ನಗುತ್ತಾರೆ. ಏಕೆಂದರೆ, ಟ್ತ್ಯಾಕ್ಟರ್​ಗಳನ್ನು ಈ ಉದ್ದೇಶಕ್ಕೆ ಬಳಸುತ್ತಾರೆ. ಮಾತ್ರವಲ್ಲ, ಭಾರಿ ಗಾತ್ರದ ವಸ್ತುಗಳನ್ನು ಅದರಲ್ಲಿ ಸಾಗಿಸುತ್ತಾರೆ.

    ಆದರೆ, ಇದು ಎಲ್ಲರಿಗೂ ಸಾಧ್ಯವಾಗುವ ಸಂಗತಿಯಲ್ಲ ಎಂಬುದು ಇಲ್ಲಿನ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಸಾಮಾಜಿಕ ತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ಇವರನ್ನು ಭೌತಶಾಸ್ತ್ರದ ಪಂಡಿತರೇ ಎನ್ನಬೇಕು.

    ಇದನ್ನೂ ಓದಿ; ಹುಡುಗಿಯರೇ ಹುಷಾರ್​..! ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ 

    ಮಂದಿರಕ್ಕೆ ಜನರೇಟರ್​ ಸಾಗಿಸುವ ದೃಶ್ಯವಿದು. ಟ್ರ್ಯಾಕ್ಟರ್​ನ ಹಿಂಭಾಗದಲ್ಲಿ ಜನರೇಟರ್​ ಹೇರಲಾಗಿದ್ದು, ಅದರ ಭಾರಕ್ಕೆ ಸಮನಾಗುವಂತೆ ಮುಂಬದಿ ನಾಲ್ಕು ಜನರು ಕುತಿದ್ದಾರೆ. ಡ್ರೈವರ್​ನ ಜಾಣ್ಮೆ ಮೆಚ್ಚತಕ್ಕದ್ದೇ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗುರುತ್ವಾಕರ್ಷಣೆ, ಗುರುತ್ವಾಕರ್ಷಣೆ ಕೇಂದ್ರ, ಭಾರದ ಹಂಚಿಕೆ, ಚಲನೆ, ಸಮತೋಲನ ಎಲ್ಲವನ್ನೂ ಅರಿತು ಇಂಥದ್ದೊಂದು ಸಾಹಸ ಕೈಗೊಳ್ಳಲಾಗಿದೆ ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ. ಆದರೂ ಇದು ಅಪಾಯಕಾರಿ ಸಾಹಸ ಎಂದು ಮತ್ತೆ ಕೆಲವರು ಎಚ್ಚರ ಎಂದಿದ್ದಾರೆ.

    ಕೇದಾರನಾಥನ ಸನ್ನಿಧಿಗೆ ಬೆಟ್ಟದ ಮೆಟ್ಟಿಲೇರುವ ಟ್ರ್ಯಾಕ್ಟರ್​….!

    ಬೆಟ್ಟ ಗುಡ್ಡಗಳಲ್ಲಿ ಸಾಮಾನು ಸಂರಜಾಮುಗಳ ಸಾಗಾಟ ಭಾರಿ ಕಷ್ಟ ಅಂಥದ್ದರಲ್ಲಿ ಮೆಟ್ಟಿಲುಗಳ ಮೂಲಕ ವಾಹನ ಸಾಗುವುದು ಸಾಧ್ಯವೇ? ಅಂಥ ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ ಕೇದಾರನಾಥ್​ ನಿವಾಸಿಗಳು. ಭಾರಿ ಸರಕನ್ನು ಹೊತ್ತ ಟ್ರ್ಯಾಕ್ಟರ್​ ಮೆಟ್ಟಿಲೇರುವ ದೃಶ್ಯ ಇಲ್ಲಿದೆ.

    Posted by Vijayavani on Tuesday, July 21, 2020

    ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts