More

    ಕರೊನಾ ಸೋಂಕಿಗೆ ಟೊಯೋಟಾ ಕಂಪನಿ ಉದ್ಯೋಗಿ ಬಲಿ, ತಂದೆ ಸತ್ತ ನಾಲ್ಕೇ ದಿನಕ್ಕೆ ಮಗನ ಸಾವು

    ರಾಮನಗರ: ಮಹಾಮಾರಿ ಕರೊನಾ ಸೋಂಕಿಗೆ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಉದ್ಯೋಗಿಯೊಬ್ಬರು ಬಲಿಯಾಗಿದ್ದಾರೆ.

    ಬೆಂಗಳೂರಿನ ನಿವಾಸಿಯಾಗಿದ್ದ 46 ವರ್ಷದ ವ್ಯಕ್ತಿ ಮೃತರು. ಇವರ ತಂದೆಯೂ ಜೂ.2ರಂದು ಕೋವಿಡ್​ಗೆ ಬಲಿಯಾಗಿದ್ದರು. ಇದಾದ ನಾಲ್ಕೇ ದಿನಕ್ಕೆ ಮಗನನ್ನೂ ಮಹಾಮಾರಿ ಸೋಂಕು ಬಲಿ ಪಡೆದಿದೆ. ಇದನ್ನೂ ಓದಿರಿ video/ ಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ ಪಾಸಿಟಿವ್, ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ

    ಬೆಂಗಳೂರಿನಿಂದ ಬಿಡದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯು ಕಳೆದ 15 ದಿನದಿಂದ ಕೆಲಸಕ್ಕೆ ಬಂದಿರಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ನಂತರ ಕರೊನಾ ಪರೀಕ್ಷೆ ಮಾಡಲಾಗಿದ್ದು, ಸೋಂಕು ಇರುವುದು ದೃಡಪಟ್ಟಿದೆ.

    ಮತ್ತೊಂದೆಡೆ ತಮ್ಮ ಸಿಬ್ಬಂದಿಗೆ ಸಾವಿಗೆ ಸಂತಾಪ ಸೂಚಿಸಿರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ (ಟಿಕೆಎಂ) ಆಡಳಿತ ಮಂಡಳಿ, ಮುಂಜಾಗ್ರಾತ ಕ್ರಮವಾಗಿ ಸರ್ಕಾರದ ಮಾನದಂಡದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ತನ್ನ ಕಾರ್ಮಿಕರ ಹಿತ ಕಾಯುವುದಾಗಿ ಹೇಳಿದೆ.

    ಮೃತರು ಜೂ.23ರಂದು ಬಿಡದಿ ಪ್ಲಾಂಟ್​ನಲ್ಲಿ ಕೊನೆಯದಾಗಿ ಕಾರ್ಯ ನಿರ್ವಹಿಸಿದ್ದರು. ಆದರೂ ಅವರೊಟ್ಟಿಗೆ ಪ್ರಾಥಮಿಕ ಮತ್ತ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುವುದು ಮತ್ತು ಅವರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು. ಪ್ಲಾಂಟ್ ಪ್ರತಿ ಪ್ರದೇಶವನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಜು.7ರಂದು ಕಂಪನಿ ಕಾರ್ಯ ನಿರ್ವಹಿಸಲಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

    ಇತ್ತೀಚೆಗೆ ಬಿಡದಿಯ ಬಾಷ್ ಕಂಪನಿಯ 57 ಉದ್ಯೋಗಿಗಳಲ್ಲಿ ಕೋವಿಡ್​ ಸೋಂಕು ಪತ್ತೆಯಾಗಿದ್ದು, ಕಂಪನಿ ಮಾತ್ರವಲ್ಲ, ಜಿಲ್ಲೆಯನ್ನೂ ತಲ್ಲಣಗೊಳಿಸಿತ್ತು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 182 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಕೋವಿಡ್​ಗೆ ಔಷಧ ಇದೆ, ಆತಂಕ ಪಡಬೇಡಿ: ಡಿಸಿಎಂ ಅಶ್ವಥನಾರಾಯಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts