More

    ಗ್ರೇಟಾಳ ಟೂಲ್​ಕಿಟ್​ ಪ್ರಕರಣದಲ್ಲಿ ಕನ್ನಡತಿ ಕೈವಾಡ! ದೆಹಲಿ ಪೊಲೀಸರ ಅತಿಥಿಯಾದ ಹೋರಾಟಗಾರ್ತಿ

    ನವದೆಹಲಿ: ದೇಶದ ರೈತರ ಹೋರಾಟದ ವಿಚಾರದಲ್ಲಿ ಮಧ್ಯೆ ಬಂದ ಗ್ರೇಟಾ ಥನ್​ ಬರ್ಗ್​ ಅವರ ಟೂಲ್​ಕಿಟ್​ ಟ್ವೀಟ್​ ಪ್ರಕರಣದಲ್ಲಿ ಕರ್ನಾಟಕದ ಹೋರಾಟಗಾರ್ತಿ ದಿಶಾ ರವಿ ಕೈವಾಡವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಆ ಟೂಲ್​ಕಿಟ್​ಗೆ ದಿಶಾ ಎಡಿಟರ್​ ಆಗಿ ಕೆಲಸ ಮಾಡಿದ್ದು, ಇದೀಗ ಆಕೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನ ಸೋಲದೇವನಹಳ್ಳಿಯ ಮನೆಯಿಂದ ದಿಶಾಳನ್ನು ಶನಿವಾರದಂದು ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಗೆ ಕರೆದೊಯ್ದಿದ್ದಾರೆ. ಅಲ್ಲಿನ ಪಟಿಯಾಲ ಹೌಸ್​ ಕೋರ್ಟ್​ ಎದುರು ಭಾನುವಾರದಂದು ಆಕೆಯನ್ನು ಹಾಜರುಪಡಿಸಲಾಗಿದೆ. ದಿಶಾ ಟೂಲ್​ಕಿಟ್​ನಲ್ಲಿ ಭಾಗವಹಿಸಿದ್ದಳು ಎನ್ನುವ ಆರೋಪವನ್ನು ದೆಹಲಿ ಪೊಲೀಸರು ಮಾಡಿದ್ದಾರೆ. ನಾನು ಪೂರ್ತಿ ಟೂಲ್​ಕಿಟ್​ ಮಾಡಿಲ್ಲ. ಬದಲಾಗಿ ಎರಡು ಮೂರು ಸಾಲು ಎಡಿಟ್​ ಮಾಡಿಕೊಟ್ಟಿದ್ದೇನೆ ಎಂದು ದಿಶಾ ನ್ಯಾಯಾಲಯದಲ್ಲಿ ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ.

    21 ವರ್ಷದ ದಿಶಾ ಗೂಗಲ್​ ಟೂಲ್​ಕಿಟ್​​ನ ಸಂಪಾದಕರಾಗಿ ಕೆಲಸ ಮಾಡಿದ್ದಾಳೆ. ಟೂಲ್​ಕಿಟ್​ ಹಂಚಿಕೆ ಮತ್ತು ಪ್ರಸಾರದಲ್ಲಿ ಆಕೆ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ. ಈ ಸಂಬಂಧ ವಾಟ್ಸ್​ಆ್ಯಪ್​ ಗ್ರೂಪ್​ ಒಂದನ್ನು ಪ್ರಾರಂಭಿಸಿದ್ದರು. ಅದರಲ್ಲಿ ಸಂವಹನ ನಡೆಸಿಕೊಂಡು ಟೂಲ್​ಕಿಟ್​ ತಯಾರಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

    ಗ್ರೇಟಾಳ ಟೂಲ್​ಕಿಟ್​ ಪ್ರಕರಣದಲ್ಲಿ ಕನ್ನಡತಿ ಕೈವಾಡ! ದೆಹಲಿ ಪೊಲೀಸರ ಅತಿಥಿಯಾದ ಹೋರಾಟಗಾರ್ತಿ

    ಯಾರು ಈ ದಿಶಾ?
    ದಿಶಾ ಬೆಂಗಳೂರಿನ ಮೌಂಟ್​ ಕಾರ್ಮಲ್​ ಕಾಲೇಜಿನಲ್ಲಿ ಬಿಬಿಎ ಪದವಿ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಕರೊನಾ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾಳೆ. ಈಕೆಯ ತಂದೆ ಅಥ್ಲೆಟಿಕ್​ ಕೋಚ್​. ದಿಶಾ ಮೊದಲಿನಿಂದಲೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾಳೆ. 2018ರಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ ಕುರಿತು ಬಹುದೊಡ್ಡ ಹೋರಾಟವನ್ನು ಫ್ರೈಡೇ ಫರ್​ ಫ್ಯೂಚರ್​ ಸಂಸ್ಥೆ ಹುಟ್ಟುಹಾಕಿತ್ತು. ಆ ಸಂಸ್ಥೆಯ ಸಹ ಸಂಸ್ಥಾಪಕಿ ಈ ದಿಶಾ. ಅಂದ ಹಾಗೆ ಹವಾಮಾನ ಬದಲಾವಣೆ ಕುರಿತು ಜಾಗತಿಕ ಹೋರಾಟಕ್ಕೆ ಸ್ವೀಡನ್​ನ ಗ್ರೇಟಾ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಳು. ಅಂದಿನಿಂದ ಗ್ರೇಟಾ ಮತ್ತು ದಿಶಾ ಸಂಪರ್ಕದಲ್ಲಿದ್ದಾರೆ.

    ಏನಿದು ಟೂಲ್​ಕಿಟ್​?
    ರೈತರ ಹೋರಾಟಕ್ಕೆ ಸಂಬಂಧ ಪಟ್ಟಂತೆ ಟೂಲ್​ಕಿಟ್​ನ್ನು ಪರಸಿರ ಕಾರ್ಯಕರ್ತೆ ಗ್ರೇಟಾ ಥನ್​ ಬರ್ಗ್​ ಟ್ವೀಟ್​ ಮಾಡಿದ್ದರು. ಜನವರಿ 26ರಂದು ನವದೆಹಲಿಯಲ್ಲಿ ನಡೆದ ಹೋರಾಟ ಪೂರ್ವ ನಿಯೋಜಿತ ಎನ್ನಲಾಗಿದ್ದು, ಅದಕ್ಕೆ ಈ ಟೂಲ್​ಕಿಟ್​ ಕೂಡ ಉತ್ತೇಜನ ನೀಡಿತ್ತು ಎನ್ನಲಾಗಿದೆ. ಆಗಂತುಕ ಕೆಲಸ ಮಾಡುವ ನಿಟ್ಟಿನಲ್ಲಿ ಟೂಲ್​ಕಿಟ್​ ತಯಾರಿಸಿದ್ದಾಗಿ ಆರೋಪವಿದ್ದು, ಟೂಲ್​ಕಿಟ್​ ಸೃಷ್ಟಿಕರ್ತರ ಮಾಹಿತಿಯನ್ನು ಕೋರಿ ಪೊಲೀಸರು ಗೂಗಲ್​ಗೆ ಮನವಿ ಸಲ್ಲಿಸಿದ್ದರು. ದೆಹಲಿ ಸೈಬರ್​ ಪೊಲೀಸರು ಖಲಿಸ್ತಾನ ಪರ ಹೋರಾಟಗಾರರು ಮತ್ತು ಟೂಲ್​ಕಿಟ್​ ಸೃಷ್ಟಿಕರ್ತರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. (ಏಜೆನ್ಸೀಸ್​)

    ರಣ್​ಬೀರ್​ – ದೀಪಿಕಾ ಮ್ಯಾಚಿಂಗ್​ ಮಾಸ್ಕ್​; ಈ ಮಾಸ್ಕ್​ ಬೆಲೆ ಕೇಳಿದರೇ ತಲೆ ತಿರುಗತ್ತೆ!

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts