More

    ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ .ಗು. ಹಳಕಟ್ಟಿ: ಡಾ. ತೋಂಟದ ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ವಚನ ಪಿತಾಮಹ ಡಾ. ಗು. ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಸಿ ಸಾಹಿತ್ಯ ಲೋಕವನ್ನು ಶ್ರೀಮಂತಗೋಳಿಸಿದ್ದಾರೆ. ಪ್ರತಿಷ್ಠಿತ ಶೈಣಿಕ ಹಾಗೂ ಆಥಿರ್ಕ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜವನ್ನು ಬೆಳೆಸಿದ ಶ್ರೇಯಸ್ಸು ಹಳಕಟ್ಟಿಯವರದು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ಲಿಂಗಾಯತ ಪ್ರಗತಿಶೀಲ 2648 ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, .ಗು. ಹಳಕಟ್ಟಿಯವರು ಶ್ರೇಷ್ಠ ವಿದ್ವಾಂಸರು. ಅವರು ಸಾಹಿತ್ಯ, ಸಂಸತಿ, ಸಮಾಜ, ಶಿಣ, ಸಹಕಾರ, ವಾಣಿಜ್ಯ ಮುಂತಾದ ಅನೇಕ ೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಅಪಾರ ಅನುಭವ, ಕಾಯಕಶ್ರದ್ಧೆ ಅವರದಾಗಿತ್ತು. ಅವರು ಸ್ಥಾಪಿಸಿದ ಬಿ.ಎಲ್​.ಡಿ.ಇ. ಸಂಸ್ಥೆ ಇಂದು ನಾಡಿನೆಲ್ಲೆಡೆ ಪ್ರಸಿದ್ಧವಾಗಿದೆ. ಹಳಕಟ್ಟಿಯವರು ಸಾಕಷ್ಟು ಕಷ್ಟಗಳಿದ್ದರೂ ಸಹಿತ ಲೆಕ್ಕಿಸದೇ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಹಳಕಟ್ಟಿಯವರು ನೀಡಿದ ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಅವುಗಳನ್ನು ತಮ್ಮ ಪ್ರವಚನದ ಮೂಲಕ ನಾಡಿಗೆ ಪರಿಚಯಿಸಿದ ಕೀತಿರ್ ಲಿಂಗಾನಂದ ಮಹಾಸ್ವಾಮಿಗಳವರದು. ಅವರು ಪ್ರವಚನ ಪಿತಾಮಹರೆಂದೇ ನಾಡಿಗೆ ಚಿರಪರಿಚಿತರು ಎಂದು ಶ್ರೀಗಳು ಹೇಳಿದರು.
    ಪಿ.ಪಿ.ಜಿ. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಜಶೇಖರ ದಾನರಡ್ಡಿ ಉಪನ್ಯಾಸ ನೀಡಿ, ಹಳಕಟ್ಟಿಯವರು ವಚನ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿದ ಪ್ರಮುಖರಲ್ಲಿ ಒಬ್ಬರು. ಮನೆಗಳಲ್ಲಿ, ಮಠಗಳಲ್ಲಿದ್ದ ಹಳೆಯ ವಚನದ ಕಟ್ಟುಗಳನ್ನು ಪಡೆದು ಸಂಶೋಧನೆ ಮಾಡಿದ್ದಾರೆ. ಹಳೆಯ ಕಟ್ಟುಗಳನ್ನು ಸಂಗ್ರಹಿಸಿ ಹೊಸ ರೂಪವನ್ನು ಕೊಟ್ಟವರು ಹಳಕಟ್ಟಿಯವರು ಎಂದು ತಿಳಿಸಿದರು.
    ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ಪ್ರಕಾಶ ಅಸುಂಡಿ ಮಾತನಾಡಿ, ಲಿಂಗಾನಂದ ಮಹಾಸ್ವಾಮಿಗಳು ವಚನ ಸಾಹಿತ್ಯದ ಸಾರವನ್ನು ನಾಡಿನಾದ್ಯಂತ ಸಂಚರಿಸಿ ಪಸರಿಸಿದ್ದಾರೆ. ಶಿವಶರಣರ ತತ್ವಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದ್ದಾರೆ. ಈ ಕಾರ್ಯದಲ್ಲಿ ಲಿಂಗಾನಂದ ಮಹಾಸ್ವಾಮಿಗಳವರ ಸೇವೆ, ಶ್ರಮ ಅಗಾಧವಾದುದು ಎಂದು ತಿಳಿಸಿದರು.
    ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಸಂದ ಅಧ್ಯ ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts