More

    ಹಾನಗಲ್​ ಕುಮಾರಸ್ವಾಮಿಗಳು ಶಿಕ್ಷಣಕ್ಕೆ ಮಹತ್ವ ನೀಡಿದವರು: ತೋಂಟದ ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಶಿಕ್ಷಣ ಮರಿಚಿಕೆಯಾಗಿದ್ದ ಕಾಲದಲ್ಲಿ ಹಾನಗಲ್​ ಕುಮಾರ ಸ್ವಾಮಿಗಳು ಸಮಾಜದ ಅಭಿವೃದ್ಧಿಗಾಗಿ, ಬಡತನ ಮತ್ತು ದಾರಿದ್ರ್ಯವನ್ನು ಹೋಗಲಾಡಿಸಲು ಶಿಕ್ಷಣ ಬಹಳ ಮುಖ್ಯ ಎಂದು ಸಾರಿದರು. ಅನೇಕ ಧಾಮಿರ್ಕ, ಶಿಣ, ಸಂ ಸಂಸ್ಥೆಗಳಿಗೆ ಮೂಲ ಪ್ರೇರಕರು ಹಾನಗಲ್​ ಕುಮಾರಸ್ವಾಮಿಗಳು ಆಗಿದ್ದರು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ತೋಂಟದಾರ್ಯ ಮಠದಲ್ಲಿ ಇತ್ತಿಚೆಗೆ ಜರುಗಿದ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಹಾನಗಲ್​ ಕುಮಾರಸ್ವಾಮಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸ್ಥಾಪಿಸಿ, ಶಿವಯೋಗ ಮಂದಿರ ಸಂಸ್ಥೆಯ ಮೂಲಕ ಸಾಧಕರಿಗೆ ಧಾಮಿರ್ಕ, ಶಿಕ್ಷಣ, ಸಂಸ್ಕಾರ, ಯೋಗ, ಸಂಗೀತ ತರಬೇತಿ ನೀಡಿದರು. ನಾಡಿಗೆ ಅರ್ಹ ಮಠಾಧೀಶರನ್ನು ನೀಡಿದ್ದಾರೆ. ಪಂಚಾರಿ ಗವಾಯಿಗಳಿಗೂ ಸಂಗೀತ ಶಿಕ್ಷಣ ನೀಡಿದ್ದರು. ವಚನ ಪಿತಾಮಹ .ಗು. ಹಳಕಟ್ಟಿಯವರೊಂದಿಗೆ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಸುವಲ್ಲಿ ಹಾನಗಲ್​ ಕುಮಾರಸ್ವಾಮಿಗಳ ಪಾತ್ರ ಮಹತ್ತರವಾದುದು ಎಂದು ಶ್ರೀಗಳು ಸ್ಮರಿಸಿದರು. ಶರಣ ಸಂಸತಿ, ಸಾಹಿತ್ಯ, ಸಂಗೀತ, ಕೃಷಿ, ಯೋಗ ಶಿವಯೋಗ, ವಿಭೂತಿ ತಯಾರಿಕೆ, ಗೋ ಸಂರಣೆ ಮುಂತಾದ ೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಸಾಧನೆ ಅನನ್ಯ ಮತ್ತು ಅನುಪಮ ಎಂದು ಶ್ರೀಗಳು ಹೇಳಿದರು.
    ರಾಜಶೇಖರ ದಾನರೆಡ್ಡಿ ಉಪನ್ಯಾಸ ನೀಡಿ, ಪುಟ್ಟರಾಜ ಕವಿ ಗವಾಯಿಗಳು ಸಂಗೀತ ೇತ್ರದ ದಿಗ್ಗಜರು, ತ್ರಿಭಾಷಾ ಕವಿಗಳು, ಬರಹಗಾರರು, ಅನುಪಮ ಅಧ್ಯಾತ್ಮ ಜೀವಿ, ಸಮಾಜ ಸುಧಾರಕರಾಗಿದ್ದರು. ಅಂಧ ಮತ್ತು ಅನಾಥ ಮಕ್ಕಳಿಗೆ ಉಚಿತವಾಗಿ ಸಂಗೀತ ಮತ್ತು ಅನ್ನ ಆಶ್ರಯ ಕಲ್ಪಿಸಿ ಅವರ ಬಾಳನ್ನು ಬೆಳಗಿದ್ದಾರೆ ಎಂದು ಹೇಳಿದರು.
    ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು.
    ಸವಿತಾ ಕುಪ್ಪಸದ, ಗುರುನಾಥ ಸುತಾರ, ಅಶೋಕ ಸುತಾರ, ವೀರೇಶ ನಂದಿಹಾಳ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಸಂಟನಾ ಕಾರ್ಯದಶಿರ್ ಅಶೋಕ ಹಾದಿ, ಸುರೇಶ ನಿಲೂಗಲ್​, ವಿವೇಕಾನಂದಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts