More

    ತೊಂಡಿತೇರಪ್ಪ ರಥದ ಪ್ರಾಯೋಗಿಕ ಪರೀಕ್ಷೆ

    ಕನಕಗಿರಿ: ಶ್ರಾವಣ ಮಾಸದ ಕೊನೆಯ ಶನಿವಾರ ದಂದು ನಡೆಯುವ ಇಲ್ಲಿನ ತೊಂಡಿತೇರಪ್ಪ ದೇವರ ಜಾತ್ರಾ ಮಹೋತ್ಸವದಲ್ಲಿ ಎಳೆಯಲಿಕ್ಕೆ ತಯಾರಿಸಲಾಗಿರುವ ನೂತನ ರಥವನ್ನು ಮಂಗಳವಾರ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.

    ಇದನ್ನೂ ಓದಿ: ಬಿನ್ನಾಳ ಬಸವೇಶ್ವರ ರಥೋತ್ಸವ ಅದ್ಧೂರಿ

    ಕಳೆದ ಮೂರ‌್ನಾಲ್ಕು ವರ್ಷಗಳ ಬೇಡಿಕೆಯಾಗಿದ್ದ ನೂತನ ರಥದ ನಿರ್ಮಾಣ ಈ ವರ್ಷ ಈಡೇರಿದೆ. ಭಕ್ತರಿಂದ ಸಂಗ್ರಹಿಸಲಾದ ಸುಮಾರು 20 ಲಕ್ಷ ರೂ. ಹೆಚ್ಚು ಹಣ ವ್ಯಯಿಸಿ ನಿರ್ಮಿಸಲಾಗಿರುವ ರಥದ ಬಿಡಿಭಾಗಗಳನ್ನು ಇತ್ತೀಚೆಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗಿತ್ತು.

    ರಥಕ್ಕೆ ಕಲ್ಲಿನ ಗಾಲಿಗಳನ್ನು ಜೋಡಿಸಿ, ಗಡ್ಡಿಯ ಮೇಲೆ ಪಟ್ಟ ಕಟ್ಟಿ ಪೂಜೆ ಸಲ್ಲಿಸಿ ಪ್ರಾಯೋಗಿಕವಾಗಿ ಪಾದಗಟ್ಟೆಯವರೆಗೆ ಎಳೆದು ನೋಡಿದ್ದು, ರಥವು ಯಶಸ್ವಿಯಾಗಿ ಸಾಗಿದೆ.

    ಇದರಿಂದ ಭಕ್ತರು ಹಾಗೂ ಆಡಳಿತ ಮಂಡಳಿ ಖುಷಿ ಪಟ್ಟಿದ್ದು, ಸೆ.9ರ ಶನಿವಾರದಂದು ಸಂಜೆ ವಿಶೇಷ ಅಲಂಕಾರಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನಡೆಸಲು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ.

    ಸುದರ್ಶನರೆಡ್ಡಿ, ಚನ್ನಬಸವ ಸೂಡಿ, ನಾಗರಾಜ ರೆಡ್ಡಿ ಬೇರ‌್ಗಿ, ಕನಕರೆಡ್ಡಿ ಮಹಲಿನಮನಿ, ಹನುಮಂತರೆಡ್ಡಿ, ಮಂಜುನಾಥ ಗಡಾದ, ಆಂಜನೇಯರೆಡ್ಡಿ ಚಿತ್ರಕಿ, ಬಿ.ಕನಕಪ್ಪ, ಹೂಗಾರ ಅಂಬಣ್ಣ, ಅನಂತಪ್ಪ ದಾಯಿಪುಲ್ಲೆ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts