More

    ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷೆ ಹಣೆ ಬರಹ ಬರೆದ 8 ವರ್ಷದ ಬಾಲಕಿ!

    ಕಲಬುರಗಿ: ಲೋಕಲ್​ ವಾರ್​ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಸದಸ್ಯರೀಗ ಪಂಚಾಯಿತಿ ಗಾದಿಗೇರಲು ಹರಸಾಹಸ ಪಡುತ್ತಲೇ ಇದ್ದಾರೆ. ಈಗಾಗಲೇ ರಾಜ್ಯಾದ್ಯಂತ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಗೆಲುವಿನ ಮಾಲೆ ಹಾಕಿಕೊಳ್ಳಲು ಅದೃಷ್ಟ ಲಕ್ಷ್ಮೀ ಪಾತ್ರ ಹೆಚ್ಚು ಮಹತ್ವ ಪಡೆದಿದೆ. ಬಹುಮತ ಸಿಗದೆ ಅಭ್ಯರ್ಥಿಗಳು ಸಮ ಮತ ಪಡೆದರೆ ನಡೆಸುವ ಲಾಟರಿ ಚೀಟಿಯೇ ಸ್ಪರ್ಧಾಳುಗಳ ಭವಿಷ್ಯ ನಿರ್ಧರಿಸಲಿದೆ.

    ಇಂತಹದ್ದೇ ಸಂದರ್ಭ ಶಹಾಬಾದ್ ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲೂ ಬಂದಿದ್ದು, 8 ವರ್ಷದ ಬಾಲಕಿ ನಯನಾ ಜಂಗೆ ಲಾಟರಿ ಚೀಟಿ ಎತ್ತುವ ಮೂಲಕ ಸ್ಪರ್ಧಾಳುಗಳ ಹಣೆಬರಹ ಬರೆದಳು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ತೊನಸನಳ್ಳಿ(ಎಸ್) ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪ.ಜಾ.ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸುಷ್ಮಾ ನಿಂಗಬೋ, ಬೆಳ್ಳೆಪ್ಪ ಅರ್ಜುನ ನಾಮಪತ್ರ ಸಲ್ಲಿಸಿದ್ದರು.

    ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷೆ ಹಣೆ ಬರಹ ಬರೆದ 8 ವರ್ಷದ ಬಾಲಕಿ!ಉಪಾಧ್ಯಕ್ಷೆ ಸ್ಥಾನಕ್ಕೆ ರೇಷ್ಮಾ ಮಲ್ಲಿನಾಥ, ನಿರ್ಮಲಾ ಶಿವರಾಜ ನಾಮಪತ್ರ ಸಲ್ಲಿಸಿದ್ದರು. 22 ಸದಸ್ಯರು ಗುಪ್ತ ಮತದಾನ ಮಾಡಿದರು. ಎರಡೂ ಬಣದವರೂ ತಲಾ 11 ಮತ ಪಡೆದರು. ಅಂತಿಮವಾಗಿ ಚೀಟಿ ಎತ್ತುವ ಪ್ರಕ್ರಿಯೆಗೆ ಸೈ ಎನ್ನಲಾಯಿತು.

    ಆಗ ಅಲ್ಲೇ ಆಟವಾಡುತ್ತಿದ್ದ ಬಾಲಕಿ ನಯನಾಳನ್ನು ಕರೆದು ಚೀಟಿ ಎತ್ತಿಸಲಾಯಿತು. ಬಿಜೆಪಿ ಬೆಂಬಲಿತ ಸುಷ್ಮಾ ನಿಂಗಬೋ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೇಷ್ಮಾ ಮಲ್ಲಿನಾಥ ಅಧಿಕಾರದ ಗದ್ದುಗೆ ಏರಿದರು. ತಹಸೀಲ್ದಾರ್ ಸುರೇಶ ವರ್ಮಾ, ತಾಪಂ ಇಒ ಲಕ್ಷ್ಮಣ ಶೃಂಗೇರಿ, ಪಿಐ ಬಿ.ಅಮರೇಶ, ಪಿಎಸ್ಐ ತಿರುಮಲೇಶ ಇದ್ದರು.

    ಬೆಂಗ್ಳೂರಲ್ಲಿ ನಿವೃತ್ತ ಉಪ ತಹಸೀಲ್ದಾರ್ ಕೊಂದು ಬಿಡದಿಯಲ್ಲಿ ಸುಟ್ಟುಹಾಕಿದ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

    ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts