More

    ದೇಶದ ಪ್ರಪ್ರಥಮ ಸೀಪ್ಲೇನ್​ಗೆ ನಾಳೆ ಚಾಲನೆ ನೀಡಲಿದ್ದಾರೆ ಮೋದಿ…

    ಗಾಂಧಿನಗರ: ದೇಶದ ಪ್ರಪ್ರಥಮ ಸೀಪ್ಲೇನ್​ಗೆ ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್​ ಅವರ 145ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅವರು ಈ ಮೂಲಕ ಗೌರವ ಸಲ್ಲಿಸಲಿದ್ದಾರೆ.

    ದೇಶದ ಪ್ರಪ್ರಥಮ ಸೀಪ್ಲೇನ್​ ಸ್ಟ್ಯಾಚ್ಯೂ ಆಫ್​ ಯುನಿಟಿ ಸ್ಥಳದಿಂದ ಅಹಮದಾಬಾದ್​ನ ಸಬರಮತಿ ನಡುವೆ ಸಂಚರಿಸಲಿದೆ. ಅವರು ಶನಿವಾರ ಸಂಜೆ ಸರ್ದಾರ್ ಸರೋವರ್ ಡ್ಯಾಮ್ ಬಳಿ ಮೂರನೇ ಸರೋವರದ ಬಳಿ ತೆರಳಲಿದ್ದು, ಅಲ್ಲಿ ಸೀಪ್ಲೇನ್​ಗೆ ಚಾಲನೆ ನೀಡಲಿದ್ದಾರೆ.

    ಏನಿದು ಸೀಪ್ಲೇನ್​?: ನೀರಿನ ಮೇಲೆ ಟೇಕಾಫ್​ ಹಾಗೂ ಲ್ಯಾಂಡಿಂಗ್ ಆಗುವಂಥ ಏರೋಪ್ಲೇನ್​ ಥರದ ವಾಹನಕ್ಕೆ ಸೀಪ್ಲೇನ್​ ಎನ್ನುತ್ತಾರೆ. ಸದ್ಯ ಸ್ಪೈಸ್​​ಜೆಟ್​ ಕಂಪನಿ ಈ ಸೀಪ್ಲೇನ್​ ಸರ್ವೀಸ್​ ನೀಡಲಿದೆ. ಕೇಂದ್ರ ಸರ್ಕಾರದ ಉಡಾನ್​ ಯೋಜನೆಯಡಿ ಈ ಸೇವೆ ನೀಡಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts