More

    ಸಾಂಸ್ಕೃತಿಕ ಸೌರಭ ಕಾರ್ಯಕ್ರಮ

    ಮುಖ್ಯ ಅತಿಥಿಗಳಾಗಿ ಸಂಸದ ಪಿ ಸಿ.ಗದ್ದಿಗೌಡರ, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಹಣಮಂತ ನಿರಾಣಿ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಮಾಜಿ ಸಚಿವೆ ಉಮಾಶ್ರೀ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಜಗದೀಶ ಗುಡಗುಂಟಿ, ಭೀಮಸೇನ ಚಿಮ್ಮನಕಟ್ಟಿ ಆಗಮಿಸುವರು.

    ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡದ ಕಾಂಗ್ರೆಸ್ ಪಿಎಂ ಮಾಡ್ತಾರಾ?: ಕೆ.ಎಸ್. ಈಶ್ವರಪ್ಪ

    ವಿಶೇಷ ಆಹ್ವಾನಿತರಾಗಿ ಬೆಳಗಾವಿ ವಿಭಾಗದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮುಂತಾದವರು ಆಗಮಿಸುವರು.

    ಕಲಾವಿದರ ಸಮಾಗಮ

    ಮಂಜುಳಾ ಸಂಭಾಳದ ಹಾಗೂ ತಂಡದಿಂದ ಸುಗಮ ಸಂಗೀತ, ಆಕಾಶವಾಣಿ ಕಲಾವಿದ ಕುಮಾರ ಬಡಿಗೇರ ಮತ್ತು ಸಂಗಡಿಗರ ಶಾಸ್ತ್ರೀಯ ಸಂಗೀತ, ಕುಮಾರಿ ಭಾರ್ಗವಿ ಮೋರಟಗಿ ತಂಡದಿಂದ ಸಮೂಹ ನೃತ್ಯ, ಸ್ಥಳೀಯ ಕಲಾವಿದ ಎಂ.ಡಿ.ಆನಂದ ಮತ್ತು ತಂಡದಿಂದ ಜನಪದ ಗೀತೆಗಳು, ರುದ್ರಯ್ಯ ಸಾಲಿಮಠ ತಂಡದಿಂದ ನಾಟಕ ‘ಹಳ್ಳಿಯಿಂದ ದಿಲ್ಲಿವರೆಗೆ’, ಮುಗಳಖೋಡದ ಶರಣ ಬಸವ ಶಾಸ್ತ್ರಿಗಳಿಂದ ಗಮಕ ಕಥಾ ಕೀರ್ತನೆ ಮತ್ತು ಸ್ಥಳೀಯ ಕಲಾವಿದರಾದ ಚನಮಲ್ಲಪ್ಪ ಕರಡಿ ತಂಡದಿಂದ ಕರಡಿ ಮಜಲು, ಮುರೆಪ್ಪ ಬೆಳಗಲಿ ತಂಡದಿಂದ ಗೊಂಬೆ ಕುಣಿತ, ಕೆಂಚಪ್ಪ ಬಡಿಗೇರ ತಂಡದಿಂದ ಕೀಲು ಕುಣಿತ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಲಾಖೆಯ ಸಹಾಯ ನಿರ್ದೇಶಕ ಕರ್ಣಕುಮಾರ್.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts