More

    ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡದ ಕಾಂಗ್ರೆಸ್ ಪಿಎಂ ಮಾಡ್ತಾರಾ?: ಕೆ.ಎಸ್. ಈಶ್ವರಪ್ಪ

    ಬಾಗಲಕೋಟೆ: ದಲಿತರನ್ನು ಸೋಲುವ ಸಂದರ್ಭದಲ್ಲಿ ಮುಂಚೂಣಿಗೆ ತರುವುದು ಕಾಂಗ್ರೆಸ್​ನ ಸಂಸ್ಕೃತಿ. ಸೋಲುವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ದಲಿತರ ನೆನಪಾಗುತ್ತದೆ. ಅದೇ ರೀತಿ ಈಗ ಇಂಡಿಯಾ ಒಕ್ಕೂಟದ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.

    ಬಾಗಲಕೋಟೆಯಲ್ಲಿ ಈ ಕುರಿತು ಮಾತನಾಡಿದ ಕೆ.ಎಸ್​. ಈಶ್ವರಪ್ಪ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸಿಎಂ ಮಾಡದ ಕಾಂಗ್ರೆಸ್ ಇನ್ನೂ ಪಿಎಂ ಮಾಡ್ತಾರಾ ಎಂದು ವ್ಯಂಗ್ಯವಾಡಿದ್ದಾರೆ.

    ದಲಿತರಿಗೆ ಮೋಸ ಮಾಡುತ್ತಿದೆ

    ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಂಡರೆ ನಮಗೆ ಅಪಾರವಾದ ಗೌರವವಿದೆ. ಖರ್ಗೆ ಪ್ರಧಾನಿ ಅಭ್ಯರ್ಥಿ ಅಂತ ಹೇಳಿದ್ದು ಬೇರೆ ಪಕ್ಷದವರು ವಿನಃ ಕಾಂಗ್ರೆಸ್​ನವರಲ್ಲ. ಯಾವೊಬ್ಬ ಕಾಂಗ್ರೆಸ್ಸಿಗರು ಹೇಳಿಲ್ಲ, ಸ್ವಾಗತನೂ ಮಾಡಿಲ್ಲ. ಕಾಂಗ್ರೆಸ್‌ ಅವರನ್ನು ಸೋಲಿಸುವುದಕ್ಕೆಂದೇ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ದೇಶದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕಾಂಗ್ರೆಸ್ ಇದೇ ರೀತಿ ಮೋಸ ಮಾಡಿಕೊಂಡೆ ಬಂದಿದೆ. ಅವರನ್ನು ನಂಬಿಸಿ ಮೋಸ ಮಾಡಿ ಕಾಂಗ್ರೆಸ್ ಇಷ್ಟು ವರ್ಷ ದೇಶದಲ್ಲಿ ಆಡಳಿತ ನಡೆಸಿದೆ. ಈಗ ಮತ್ತೊಬ್ಬ ದಲಿತ ನಾಯಕನಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    KS Eshwarappa

    ಇದನ್ನೂ ಓದಿ: ಐಷಾರಾಮಿ ವಿಮಾನದಲ್ಲಿ ಪ್ರಯಾಣ; ಮಜವಾದಿ ಸಿದ್ದರಾಮಯ್ಯ ಆಡಂಬರಕ್ಕೇನು ಕಡಿಮೆ ಇಲ್ಲ: ಬಿಜೆಪಿ

    ಸಿದ್ದರಾಮಯ್ಯ ಕಾಂಗ್ರೆಸ್​​ನಲ್ಲಿ ಕಣ್ಣು ಬಿಡುವ ಮೊದಲೇ ಮಲ್ಲಿಕಾರ್ಜುನ ಖರ್ಗೆ ನಾಯಕರಾಗಿದ್ದವರು. ಕಾಂಗ್ರೆಸ್​ನವರು ರಾಜ್ಯದಲ್ಲಿ ಒಬ್ಬ ದಲಿತ ಸಿಎಂ ಮಾಡಲಿಲ್ಲ. ದಲಿತರು, ಹಿಂದುಳಿದವರ ಬಗ್ಗೆ ಆಸಕ್ತಿ ಇದ್ದಿದರೆ ಇಂದಿರಾಗಾಂಧಿ ಅಷ್ಟು ಸಲ ಪ್ರಧಾನಿ ಆಗಿದ್ರಲ್ಲ, ಆಗಲೇ ಒಂದು ಅವಧಿ ಬಿಟ್ಟು ಕೊಡಬಹುದಿತ್ತು ಆ ಸಮಯದಲ್ಲಿ ಜಗಜೀವನ್ ರಾಮ್​ರ ಕಡೆಗೆ ಯಾಕೆ ಗಮನ ಕೊಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಕಾಂಗ್ರೆಸ್​ನವರಿಗೆ ರಾಜಕೀಯ ದಾಳವಾಗಿದ್ದಾರೆ

    ದಲಿತರು, ಹಿಂದುಳಿದವರು ಕಾಂಗ್ರೆಸ್​ನವರಿಗೆ ರಾಜಕೀಯ ದಾಳವಾಗಿದ್ದಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು ಅಂತ ಇಡೀ ದೇಶದ ಜನರು ತೀರ್ಮಾನ ಮಾಡಿದ್ದಾರೆ. ಬೇಕಿದ್ದರೆ ಕಾಂಗ್ರೆಸ್​ನವರನ್ನು ವೈಯಕ್ತಿಕವಾಗಿ ಕೇಳಿ ನೋಡಿ. ಹೀಗಿದ್ದಾಗ ಒಮ್ಮೆಲೆ ಖರ್ಗೆ ಅವರನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಖರ್ಗೆ ಅವರು ದೊಡ್ಡ ಮಾತು ಹೇಳಿದ್ದಾರೆ. ಮೊದಲು ಗೆಲ್ಲೋಣ ಆಮೇಲೆ ನೋಡೋಣ ಎಂದಿದ್ದಾರೆ.

    ಅಷ್ಟಕ್ಕೂ ಖರ್ಗೆ ಪಿಎಂ ಅಂತ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅಥವಾ ಬೇರೆಯವರು ಹೇಳಿದ್ದಾರಾ. ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ಹೇಳಿದ್ದಾರೆ. ದೇಶದಲ್ಲಿ ಒಬ್ಬ ಕಾಂಗ್ರೆಸ್ಸಿಗನೂ ಇದಕ್ಕೆ ಬೆಂಬಲ ಸೂಚಿಸಿಲ್ಲ. ಸ್ವಾತಂತ್ರ್ಯ ಬಂದಾಗಿಂದ ಅವರು ದಲಿತರನ್ನ ಪಿಎಂ ಮಾಡದೇ ಈಗ ಬೇರೆಯವರು ಹೇಳಿದ್ರೂ ಕಾಂಗ್ರೆಸ್​ನವರು ಅದನ್ನ ಸ್ವಾಗತಿಸಿಲ್ಲ ಎಂದು ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts