More

    ನಾಳೆ ವಿಶ್ವ ಪುರುಷರ ದಿನ; ಇದರ ಇತಿಹಾಸ, ಮಹತ್ವ ಏನು?

    ಬೆಂಗಳೂರು: ಪ್ರತಿ ವರ್ಷ ಮಾರ್ಚ್​ 8ರಂದು ಜಗತ್ತಿನಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಧನೆಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಸಮಾಜ ಮತ್ತು ಕುಟುಂಬದಲ್ಲಿ ಪುರುಷರ ಪಾತ್ರದ ಪ್ರಾಮುಖ್ಯತೆ ಮತ್ತು ಕೊಡುಗೆಯ ಮಹತ್ವವನ್ನು ಜನರಿಗೆ ತಲುಪಿಸಲು ಪುರುಷರ ದಿನವನ್ನು ಆಚರಿಸಲಾಗುತ್ತದೆ. ಈಗಿನ ಕಾಲದಲ್ಲಿ ಪುರುಷರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು 1999ರಲ್ಲಿ ವಿಶ್ವ ಪುರುಷರ ದಿನವನ್ನು ಆಚರಿಸಲು ಪ್ರಾರಂಭ ಮಾಡಲಾಗಿತ್ತು.

    ಇತಿಹಾಸ:
    ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿನ ವೆಸ್ಟ್ ಇಂಡೀಸ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕ ಡಾ. ಜೆರೋಮ್ ಟೀಲಕ್ಸಿಂಗ್ ಎನ್ನುವವರು ತಮ್ಮ ತಂದೆಯ ಜನ್ಮದಿನದಂದು 1999ರಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಮೊದಲ ಬಾರಿಗೆ ಆಚರಿಸಿದರು. ಈ ದಿನ, ಅವರು ಪುರುಷರ ಸಮಸ್ಯೆಗಳನ್ನು ಬಗ್ಗೆ ಮಾತನಾಡಲು ಅನೇಕರಿಗೆ ಪ್ರೋತ್ಸಾಹಿಸಿದರು. ಭಾರತದಲ್ಲಿ ಮೊದಲ ಬಾರಿಗೆ 2007 ರಲ್ಲಿ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಯಿತು.

    ಮಹತ್ವ:
    ಈಗಿನ ಕಾಲದಲ್ಲಿ ಒಬ್ಬ ಮಹಿಳೆ ಸಣ್ಣ ಬಾಲಕನಿಗೆ ‘ನೀನು ದೊಡ್ಡವನಾದ ಮೇಲೆ ನಿನ್ನನ್ನೇ ಮದುವೆಯಾಗೋದು’ ಎಂದು ಹೇಳಿದರೆ ‘ಕ್ಯೂಟ್​ ಅಲಾ’ ಎಂದು ಜನ ಪ್ರತಿಕ್ರಿಯಿಸುತ್ತಾರೆ. ಅದೇ ಓರ್ವ ಪುರುಷ ಸಣ್ಣ ಹುಡುಗಿಗೆ ಇದನ್ನೇ ಹೇಳಿದರೆ ಆತನನ್ನು ನೋಡುವ ರೀತಿಯೇ ಬೇರೆ. ಅಲ್ಲಿಗೆ ಆತನೇ ಅಪರಾಧಿ. ಇಂತಹ ಸಾಮಾಜಿಕ ಅಸಮಾನತೆಗಳ ಬಗ್ಗೆ ವಿಶ್ವ ಪುರುಷರ ದಿನ ಮಾತನಾಡುತ್ತದೆ.

    ಪ್ರತಿ ವರ್ಷ ನವೆಂಬರ್ 19 ರಂದು ‘ಅಂತಾರಾಷ್ಟ್ರೀಯ ಪುರುಷರ ದಿನ’ ಆಚರಿಸಲಾಗುತ್ತದೆ. ಪುರುಷರ ಯೋಗಕ್ಷೇಮ ಮತ್ತು ಆರೋಗ್ಯದ ಕಡೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಇದರ ಅನೇಕ ಉದ್ದೇಶಗಳಲ್ಲಿ ಒಂದು. ಪುರುಷರ ದಿನ ಸಮಾಜದಲ್ಲಿ ಪುರುಷರ ಬಗ್ಗೆ ಸಕಾರಾತ್ಮಕ ಚಿತ್ರವನ್ನು ಪ್ರತಿಬಿಂಬಿಸುವುದು ಇದರ ಉದ್ದೇಶ. ಸಮಾಜ, ಸಮುದಾಯ, ಕುಟುಂಬ, ಮದುವೆ, ಮಕ್ಕಳ ಆರೈಕೆ ಮತ್ತು ಪರಿಸರಕ್ಕೆ ಪುರುಷರ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಮೀಸಲು. ಸಮಾಜದಲ್ಲಿ ಪುರುಷರ ವಿರುದ್ಧದ ತಾರತಮ್ಯವನ್ನು ಎತ್ತಿ ತೋರಿಸುವ ಈ ದಿನ ಲಿಂಗ ಸಮಾನತೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ. (ಏಜೆನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts