More

    ಬೆಳೆ ಇದ್ದರೂ ಉತ್ತಮ ಬೆಲೆ ಇಲ್ಲ, ಟೊಮ್ಯಾಟೊ ಬೆಳೆದು ಕೈಸುಟ್ಟುಕೊಂಡ ರೈತ

    ಮುಳಬಾಗಿಲು: ಭಾರತ ಲಾಕ್‌ಡೌನ್‌ನಿಂದ ರಾಜ್ಯ ಮತ್ತು ಅಂತಾರಾಜ್ಯದಲ್ಲಿ ಟೊಮ್ಯಾಟೊಗೆ ಸೂಕ್ತ ಬೆಲೆ ಇಲ್ಲದೆ, ಸಲಿಗೆ ಬಂದ ಹಣ್ಣು ಕೀಳಲು ಸಾಧ್ಯವಾಗದೆ ಕೋಲಾರದ ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದು, ಹಾಕಿದ ಬಂಡವಾಳ ವಾಪಸ್ ಬರದ ಆತಂಕದಲ್ಲಿದ್ದಾರೆ.

    ಹೆಚ್ಚು ಇಳುವರಿ ಪಡೆಯಲು ಔಷಧ ಸಿಂಪಡಣೆ ಅನಿವಾರ್ಯ. ಆದರೆ ಲಾಕ್‌ಡೌನ್ ಕಾರಣದಿಂದ ರಸಗೊಬ್ಬರ ಹಾಗೂ ಕೀಟನಾಶಕ ಅಂಗಡಿಗಳ ಬಾಗಿಲು ಮುಚ್ಚಿದ್ದು, ಬೆಳೆಯಲ್ಲಿ ರೋಗ ನಿಯಂತ್ರಣಕ್ಕೆ ಬರದೇ ಆತಂಕಕ್ಕೆ ಒಳಗಾಗಿದ್ದಾರೆ. ಕೈ ಸಾಲ ಮಾಡಿ ಟೊಮ್ಯಾಟೊ ಬೆಳೆದಿದ್ದು, ಈಗ ಸಾಲ ತೀರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

    ಲಾಕ್‌ಡೌನ್ ಕಾರಣದಿಂದ ಕೃಷಿ ಉತ್ಪನ್ನ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಪಟ್ಟ ಇಲಾಖೆಗಳು ಆದ್ಯತೆ ನೀಡದ ಪರಿಣಾಮ ಹಣ್ಣು, ತರಕಾರಿ ಮಾರಲು ಮಾರುಕಟ್ಟೆ ಸಿಗದೆ ತೋಟದಲ್ಲೇ ಕೊಳೆಯುವಂತಾಗಿದೆ.

    ತಾಲೂಕಿನ ಸುತ್ತಮುತ್ತಲ ಬಹಳಷ್ಟು ರೈತರು ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಯುತ್ತಾರೆ. ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಅಂದಾಜು 2 ಲಕ್ಷ ರೂ. ಖರ್ಚು ಬರಲಿದ್ದು, ಈಗ ಬೆಲೆ ಇಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

    ನಾನು 40 ವರ್ಷದಿಂದ ಟೊಮ್ಯಾಟೊ ಮತ್ತು ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಈಗ ಸಾಲ ಮಾಡಿ 2 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದೇನೆ. ಬೆಲೆ ಇಲ್ಲದೆ ಹಣ್ನುಗಳು ಗಿಡದಲ್ಲೇ ಕೊಳೆಯುತ್ತಿವೆ. ಹಾಕಿದ ಬಂಡವಾಳ ವಾಪಸ್ ಬರುವ ನಿರೀಕ್ಷೆ ಇಲ್ಲ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
    ಇ. ಕೃಷ್ಣಪ್ಪ ಸಿದ್ದಘಟ್ಟ, ರೈತ,ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts