More

    ಜಪಾನ್​ ತಯಾರಿಸಿದೆ ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್!

    ಟೋಕ್ಯೊ: ಇಲ್ಲಿ ಕಾಣಿಸುವ ಅಂದದ, ಹೊಳೆಯುವ ಪಾತ್ರೆಗಳು ಪ್ಲಾಸ್ಟಿಕ್​ನಿಂದ ಮಾಡಿದ್ದು! ಸದಾ ಹೊಸ ಟೆಕ್ನಾಲಜಿಯ ವಿಚಾರದಲ್ಲಿ ಮುಂದಿರುವ ಜಪಾನ್​ ದೇಶದಲ್ಲಿ ಈ ಮಹತ್ವದ ಸಂಶೋಧನೆ ನಡೆದಿದೆ.

    ಈ ಪ್ಲಾಸ್ಟಿಕ್​ಅನ್ನು ಜಪಾನ್​ನ ಟೋಕ್ಯೋ ನಗರಾಡಳಿತ ಮತ್ತು ಸ್ಥಳೀಯ ಕಂಪೆನಿ ಜೊತೆಗೂಡಿ ಅಭಿವೃದ್ಧಿ ಪಡಿಸಿದ್ದು ವಿಭಿನ್ನ ರೀತಿಯ ಪಾತ್ರೆಗಳ ವಿನ್ಯಾಸವನ್ನೂ ಮಾಡಿದೆ. ಇವು ಸದ್ಯದಲ್ಲೇ ಮಾರುಕಟ್ಟೆಗೂ ಬರಲಿವೆ.

    ಈ ವಸ್ತುವನ್ನು ಮೀರಾಯ್​ ವುಡ್​ ಎಂಬ ಪ್ರಕಾರದ ಮರ ಹಾಗೂ ಬಯೋಡಿಗ್ರೇಡೆಬಲ್​ ಪ್ಲಾಸ್ಟಿಕ್​ ಬಳಸಿ ಮಾಡಲಾಗಿದೆ. ಈ ಮೀರಾಯ್​ ವುಡ್​ಅನ್ನು ಬೇಸ್​ಬಾಲ್​ ಬ್ಯಾಟ್​ಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ಅರ್ಥ ಭವಿಷ್ಯದ ಮರ ಎಂದು. ಇದನ್ನು ಭವಿಷ್ಯ ಬದಲಿಸುವ ವಸ್ತುವಿನ ಉತ್ಪಾದನೆಯಲ್ಲಿ ಬಳಸಲಿದ್ದೇವೆ. ಹೀಗಾಗಿ ಇದರ ಹೆಸರು ಸಾರ್ಥಕ ಆಗಿದೆ ಎಂದೇ ಹೇಳಬಹುದು.

    ಅಂದ ಹಾಗೆ ಈ ಪ್ಲಾಸ್ಟಿಕ್​ಅನ್ನು ತಯಾರಿಸಿದ್ದು ರ್ಯೋಕಾ ಸಾಂಗ್ಯೋ ಎಂಬ ಸಂಸ್ಥೆ. ಇದು 50 ವರ್ಷಕ್ಕೂ ಹೆಚ್ಚಿನ ಸಮಯದಿಂದ ಪ್ಲಾಸ್ಟಿಕ್​ ಉತ್ಪಾದನೆಯಲ್ಲಿ ತೊಡಗಿದೆ. ಈಗ ಜಗತ್ತಿನಲ್ಲಿ ಪ್ಲಾಸ್ಟಿಕ್​ ಹೆಚ್ಚಾಗುತ್ತಿರುವ ಕಾರಣ ಅದನ್ನು ನಿಯಂತ್ರಿಸುವ ನೈತಕ ಹೊಣೆಗಾರಿಕೆಯನ್ನು ಈ ಕಂಪೆನಿ ಹೊತ್ತುಕೊಂಡಿದೆ ಎಂದೇ ಹೇಳಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts